ಗರ್ಭಿಣಿ ಪೇದೆಗಳು ವಾಪಸ್
ವಿಧಾನ ಮಂಡಲ ಅಧಿವೇಶನದ ಭದ್ರತೆಗೆ ನಿಯೋಜನೆಗೊಂಡು ಪರದಾಡುತ್ತಿದ್ದ...
ವಿಧಾನ ಪರಿಷತ್: ವಿಧಾನ ಮಂಡಲ ಅಧಿವೇಶನದ ಭದ್ರತೆಗೆ ನಿಯೋಜನೆಗೊಂಡು ಪರದಾಡುತ್ತಿದ್ದ ಗರ್ಭಿಣಿ ಪೇದೆಗಳ ಮೇಲೆ ಕೊನೆಗೂ ಸರ್ಕಾರ ಕನಿಕರ ತೋರಿ ಇಲ್ಲಿನ ಕರ್ತವ್ಯದಿಂದ ಬಿಡುಗಡೆ ಮಾಡಿದೆ.
ಸದಸ್ಯೆ ತಾರಾ ಈ ಕುರಿತು ಸರ್ಕಾರದ ಗಮನ ಸೆಳೆದು, ಅಧಿವೇಶನದ ಭದ್ರತೆಗಾಗಿ ನೇಮಿಸಲಾಗದ ಮಹಿಳಾ ಪೊಲೀಸ್ ಪೇದೆಗಳಲ್ಲಿ 7 ಗರ್ಭಿಣಿಯರಿದ್ದಾರೆ. ಅವರಲ್ಲಿ ಒಬ್ಬರು ಚಿಕಿತ್ಸೆಗೆ ದಾಖಲಾಗಿದ್ದಾರೆ.
ಮೂಲಭೂತ ಸೌಲಭ್ಯ ಇಲ್ಲದೆ ಪರಿತಪಿಸುತ್ತಿರುವ ಅವರನ್ನು ತಕ್ಷಣ ವಾಪಸ್ ಕಳುಹಿಸಬೇಕೆಂದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಜಾರ್ಜ್, ಗರ್ಭಿಣಿ ಪೇದೆಗಳಿಗೆ ಸ್ವಂತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ಅನಾರೋಗ್ಯಕ್ಕೆ ಒಳಗಾಗಿದ್ದ ಒಬ್ಬರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಉತ್ತರಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.