ರಾಜಸ್ಧಾನ ಬಿಜೆಪಿ ಶಾಸಕ ಭವಾನಿ ಸಿಂಗ್ ರಜಾವತ್ 
ದೇಶ

ಮತಹಾಕದಿದ್ದಲ್ಲಿ ಎತ್ತಂಗಡಿ: ರಾಜಸ್ಥಾನ ಬಿಜೆಪಿ ಶಾಸಕನ ಧಮ್ಕಿ ದೃಶ್ಯ

ಅಕ್ರಮವಾಗಿ ನಿರ್ಮಿಸಲ್ಪಟ್ಟಿರುವ ಮನೆಗಳನ್ನು ಧ್ವಂಸಗೊಳಿಸುವುದಾಗಿ ಮತದಾರರಿಗೆ ಧಮ್ಕಿ...

ಕೊಟ್ಟಾ: ರಾಜಸ್ಥಾನದಲ್ಲಿ ಬಿಜೆಪಿ ಶಾಸಕನೊಬ್ಬ ಮತ ಹಾಕುವಂತೆ, ಮತದಾರರಿಗೆ ಬೆದರಿಕೆ ಹಾಕುತ್ತಿದ್ದ ದೃಶ್ಯ, ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

ರಾಜಸ್ಧಾನದ ಕೊಟ್ಟಾ ತಾಲೂಕಿನ ಲಾತ್‌ಪುರ ಕ್ಷೇತ್ರದ ಬಿಜೆಪಿ ಶಾಸಕ ಭವಾನಿ ಸಿಂಗ್ ರಜಾವತ್, ಕಳೆದ ತಿಂಗಳು ರಾಜಸ್ಥಾನದಲ್ಲಿ ನಡೆದಿದ್ದ ಕಾರ್ಪೋರೇಷನ್ ಚುನಾವಣೆ ವೇಳೆ, ಮತದಾರರಿಗೆ ಮತ ಚಲಾಯಿಸುವಂತೆ ಬೆದರಿಕೆ ಹಾಕುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಾರಿ ಸುದ್ದಿ ಮಾಡುತ್ತಿದೆ.

ಆ ದೃಶ್ಯದಲ್ಲಿ ಭವಾನಿ ಸಿಂಗ್, ಬಿಜೆಪಿಗೆ ಮತ ಚಲಾಯಿಸದಿದ್ದಲ್ಲಿ ಈ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲ್ಪಟ್ಟಿರುವ ಮನೆಗಳನ್ನು ಧ್ವಂಸಗೊಳಿಸುವುದಾಗಿ ಮತದಾರರಿಗೆ ಧಮ್ಕಿ ಹಾಕುತ್ತಿದ್ದಾರೆ.

ಈ ದೃಶ್ಯದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಭವಾನಿ ಸಿಂಗ್, ನಾನು ಯಾರಿಗೂ ಬೆದರಿಕೆ ಒಡ್ಡಿಲ್ಲ. ನಾನು ಬಡಜನರ ಅಭಿವೃದ್ದಿಯನ್ನು ಬಯಸುವವನು. ಈ ಪ್ರದೇಶದಲ್ಲಿ ವಾಸಿಸಲು ಈ ಜನರಿಗೆ ನಾನೇ ಸಹಾಯ ಮಾಡಿದ್ದೆನು. ಈ ಪ್ರದೇಶದ ಮತ್ತಷ್ಟು ಅಭಿವೃದ್ದಿಗಾಗಿ ಬಿಜೆಪಿಗೆ ಮತ ಹಾಕಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದೆನು ಎಂದು ರಾಗ ಬದಲಿಸಿದ್ದಾರೆ.

ಈ ಹಿಂದೆ ಬಿಜೆಪಿ ಶಾಸಕ ಪ್ರಹ್ಲಾದ್ ಗುಂಜಾಲ್, ತಮಗೆ ಪರಿಚಯಸ್ಧ ದಾದಿಯೊಬ್ಬರಿಗೆ ವರ್ಗಾವಣಿ ಮಾಡಿಕೊಡುವಂತೆ ಹಿರಿಯ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದ ಆಡಿಯೋ ರೆಕಾರ್ಡಿಂಗ್ ಬಾರಿ ಚರ್ಚೆಗೆ ಕಾರಣವಾಗಿತ್ತು. ಆ ಸುದ್ದಿ ಮಾಸುವ ಮುನ್ನವೇ ಮತ್ತೊಬ್ಬ ಬಿಜೆಪಿ ಶಾಸಕರ ಧಮ್ಕಿ ದೃಶ್ಯ ಸುದ್ದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಆಪ್ ಕಾರ್ಯಕರ್ತ ನನ್ನ ಕುಟುಂಬವನ್ನು ನಿಂದಿಸಿದ, ಅವರದ್ದೇ ಭಾಷೆಯಲ್ಲಿ ಉತ್ತರ ಕೊಟ್ಟೆ: ಕಪಾಳಮೋಕ್ಷ ವಿವಾದದ ಬಗ್ಗೆ ದೆಹಲಿ ಸಚಿವ ಪರ್ವೇಶ್ ವರ್ಮಾ

1st ODI: ಕೊಹ್ಲಿ, ಗಿಲ್ ಸಿಡಿಲಬ್ಬರದ ಶತಕ, ವಿಂಡೀಸ್ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ!

ಶತಕಗಳ ಶತಕ: 'ಮಾಸ್ಟರ್ ಬ್ಲಾಸ್ಟರ್' ಸಾರ್ವಕಾಲಿಕ ದಾಖಲೆ ಮುರಿಯಲು 'ಚೇಸ್-ಮಾಸ್ಟರ್' ಮತ್ತಷ್ಟು ಸನಿಹ!

ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ Virat Kohli: ಸಚಿನ್ ನಂತರ ಈ ದಾಖಲೆ ಬರೆದ ವಿಶ್ವದ 2ನೇ ಆಟಗಾರ!

ಟೈರ್‌ ಬ್ಲಾಸ್ಟ್‌, 100 ಮೀ. ಕಾರು ಸ್ಕಿಡ್; ನಿಯಂತ್ರಣ ತಪ್ಪಿದ ಫಾರ್ಚುನರ್‌, ಭಯಾನಕ ಅಪಘಾತ, BJP ಶಾಸಕ ಪಾರು! Video