ಲಖನೌ: ಮೈ ಕೊರೆವ ಚಳಿಗೆ ಉತ್ತರ ಪ್ರದೇಶದಾದ್ಯಂತ 31 ಮಂದಿ ಬಲಿಯಾಗಿದ್ದಾರೆ ಎಂದು ಮಂಗಳವಾರ ಅಧಿಕಾರಿಗಳು ವಿವರ ನೀಡಿದ್ದಾರೆ.
ಬಾರಿ ಚಳಿ ಮತ್ತು ಹಿಮಪಾತದಿಂದಾಗಿ ಡಿಸೆಂಬರ್ 28ರವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಇದೇ ವೇಳೆ ದಟ್ಟ ಮಂಜು ಆವರಿಸಿರುವುದರಿಂದ ರೈಲು ಸಂಚಾರದಲ್ಲೂ ವ್ಯತ್ಯಯ ಉಂಟಾಗಿದ್ದು, ರಾಜ್ಯಾದ್ಯಂತ 150ಗಳ ಸಂಚಾರ ನಿಲ್ಲಿಸಲಾಗಿದೆ ಎಂದು ರೇಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ವ ಉತ್ತರ ಪ್ರದೇಶದಲ್ಲಿ ಅತಿಯಾದ ಚಳಿಗೆ ಎಂಟು ಮಂದಿ, ಅವದದಲ್ಲಿ ಆರು ಮಂದಿ, ಮೀರತ್ ಹಾಗೂ ಕಾನ್ಪುರ್‌ದಲ್ಲಿ ತಲಾ ಇಬ್ಬರು, ಏಳು ಮಂದಿ ಮೋರಾದಾಬಾದ್ ಹಾಗೂ ಆರು ಮಂದಿ ಅಲಿಗಡ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಸೋಮವಾರ ದಾಖಲಾಗಿತ್ತು. ವಾರಣಾಸಿಯಲ್ಲಿ 3 ಡಿಗ್ರಿ ಸೆಲ್ಸಿಯಸ್, ಮೀರತ್ ಮತ್ತು ಮುಜಾಫರ್‌ನಗರದಲ್ಲಿ ಅತೀಕಡಿಮೆ 2 ಡಿಗ್ರಿ ಉಷ್ಣಾಂಶ ದಾಖಲಾಗಿದೆ.
ಇನ್ನೂ ಕೆಲ ದಿನ ಚಳಿ ಮುಂದುವರೆಯಲಿದೆ ಎಂದು ಹವಮಾನ ವರದಿ ಹೇಳಿದೆ.