ಕೋಟಾ: ಕೋಟಾ ಕ್ಷೇತ್ರದ ಬಿಜೆಪಿ ಶಾಸಕನ ಅಸಭ್ಯ ಅನುಚಿತ ಹಾಗೂ ಅಸಭ್ಯ ವರ್ತನೆ ಆರೋಪದ ಮೇಲೆ ಬಿಜೆಪಿ, ಪಕ್ಷದಿಂದ ಅಮಾನತುಗೊಳಿಸಿದೆ. ರಾಜಾಸ್ತಾನದಲ್ಲಿ ತಮ್ಮ ಪರಿಚಯಸ್ಥ ಸಿಬ್ಬಂದಿಗೆ ವರ್ಗಾವಣೆ ನೀಡುವಂತೆ, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಗುಂಜಾಲ್‌ನನ್ನು ಪಕ್ಷದಿಂದ ಉಚ್ಛಾಟನೆಗೊಳಿಸಲಾಗಿತ್ತು.
ಪಕ್ಷದಿಂದ ಉಚ್ಛಾಟನೆಗೊಂಡಿರುವ ಪ್ರಹ್ಲಾದ್ ಗುಂಜಾಲ್, ಕುನಾದಿಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. 'ನಾನು ಕಾಂಗ್ರೆಸ್ ನಾಯಕರಂತೆ ಕೊಲೆ, ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಲಡ್ಪುರದ ಬಿಜೆಪಿ ಶಾಸಕ ಭವಾನಿ ಸಿಂಗ್ ರಾಜ್‌ವಟ್, ತಮ್ಮ ಕ್ಷೇತ್ರದಲ್ಲಿನ ಮತದಾರರ ಬಳಿ ಬಿಜೆಪಿಗೆ ಮತ ಹಾಕಬೇಕು, ಇಲ್ಲದಿದ್ದರೆ ಕ್ಷೇತ್ರದಿಂದ ಹೊರ ಹಾಕುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದ ದೃಶ್ಯ ದೇಶಾದ್ಯಂತ ಸುದ್ದಿ ಮಾಡಿತ್ತಲ್ಲದೆ, ಕಾಂಗ್ರೆಸ್ಸಿನ ವಿಮರ್ಷೆಗೂ ಎಡೆ ಮಾಡಿಕೊಟ್ಟಿತು.
ಇದೀಗ ಉಚ್ಛಾಟಿತ ಬಿಜೆಪಿ ಶಾಸಕ ಪ್ರಹ್ಲಾದ್ ಗುಂಜಾಲ್, ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಮಾಡಿರುವ ವಿವಾದಾತ್ಮಕ ಹೇಳಿಕೆ ಕಾಂಗ್ರೆಸ್ಸಿನ ಕೆಂಗಣ್ಣಿಗೆ ಗುರಿಯಾಗಿದೆ.