ದುಬೈ: ವಾಹನ ಚಾಲನೆ ಮೇಲಿನ ನಿಷೇಧವನ್ನು ಧಿಕ್ಕರಿಸಿದ್ದಕ್ಕೆ ಸೌದಿಯ ಮಹಿಳೆಯರಿಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಿಷೇಧ ಧಿಕ್ಕರಿಸಿದಕ್ಕಾಗಿ ಈಗಾಗಲೇ ಜೈಲುಪಾಲಾಗಿರುವ ಲೊವುಜೈನ್ ಅಲ್ ಹಥಾಲೌಲ್(25) ಮತ್ತು ಮಾಯ್ಸಾ ಅಲ್-ಅಮೌದಿ(33) ಎಂಬ ಮಹಿಳೆಯರ ಪ್ರಕರಣವನ್ನು ಭಯೋತ್ಪಾದನೆಗೆ ಸಂಬಂಧಿಸಿದ ಕೋರ್ಟ್‌ನಲ್ಲಿ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ.
ಆದರೆ, ಇದು ನಿಷೇಧ ಉಲ್ಲಂಘಿಸಿ ವಾಹನ ಚಲಾಯಿಸಿದಕ್ಕಾಗಿ ಅಲ್ಲ, ಬದಲಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಕ್ತಪಡಿಸಿದಕ್ಕಾಗಿ ಎಂದು ಹೇಳಲಾಗಿದೆ. ಸೌದಿಯಲ್ಲಿ ಮಹಿಳೆಯರು ವಾಹನ ಚಲಾಯಿಸುವಂತಿಲ್ಲ. ಈ ಕಾನೂನು ವಿರುದ್ಧ ಕೆಲ ವರ್ಷಗಳಿಂದ ಮಹಿಳೆಯರು ಸಿಡಿದೆದ್ದಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಆಂದೋಲವನ್ನೇ ಆರಂಭಿಸಿದ್ದಾರೆ. ಕೆಲವರಂತು ಕಾನೂನು ಉಲ್ಲಂಘಿಸಿ ವಾಹನ ಚಲಾಯಿಸುವ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.