ವಿಧಾನ ಸೌಧ 
ದೇಶ

ರಾಜ್ಯದ 20 ಪಪಂ, ಪುರಸಭೆ ಮೇಲ್ದರ್ಜೆಗೆ

ರಾಜ್ಯ 20 ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಗಳನ್ನು ಮೇಲ್ದರ್ಜೆಗೇರಿಸಿ...

ಬೆಂಗಳೂರು: ರಾಜ್ಯ 20 ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಗಳನ್ನು ಮೇಲ್ದರ್ಜೆಗೇರಿಸಿ ರಾಜ್ಯ ಸರ್ಕಾರ ರಾಜ್ಯ ಪತ್ರ ಹೊರಡಿಸಿದೆ.

ಹಿಂದಿನ ಎರಡು ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಸಂಪುಟದ ನಿರ್ಣಯದಂತೆ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ರಾಜ್ಯ ಪತ್ರ ಹೊರಡಿಸಿದ್ದಾರೆ. ಆದೇಶದಂತೆ ಪಟ್ಟಣ ಪಂಚಾಯಿತಿಗಳಾದ ಜೇವರ್ಗಿ, ಹುಕ್ಕೇರಿ, ಕುಡಚಿ, ಸದಲಗಾ, ಪಾಂಡವಪುರ, ಅಫಜಲ್‌ಪುರ, ಚಿಂಚೋಳಿ, ಗುರುಮಿಠಕಲ್. ಹುನಗುಂದ ಹಾಗೂ ಟಿ.ನರಸೀಪುರವನ್ನು ಪುರಸಭೆ ದರ್ಜೆಗೆ ಏರಿಸಲಾಗಿದೆ. ಹಾಗೆಯೇ ಪುರಸಭೆಗಳಾದ ಹೊಸಕೋಟೆ, ಹಿರಿಯೂರು, ಕನಕಪುರ, ಮುಳಬಾಗಿಲು, ಶಿಡ್ಲಘಟ್ಟ, ಮುಧೋಳ, ಅರಸೀಕೆರೆ, ಸಿರಗುಪ್ಪ, ಉಳ್ಳಾಲ ಹಾಗೂ ಸುರಪುರವನ್ನು ನಗರಸಭೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ.

ಪುರಸಭೆ ಹಾಗೂ ನಗರಸಭೆಯನ್ನಾಗಿ ಪರಿವರ್ತಿಸಿದ ಬಳಿಕ ಕೆಲ ಗ್ರಾಮಗಳನ್ನು ನಗರ ಪ್ರದೇಶಗಳಿಗೆ ಸೇರಿಸಲಾಗಿದೆ.

  • ಹೊಸಕೋಟೆ-ದಂಡುಪಾಳ್ಯ, ಕೊಳತೂರು, ವರದಾಪುರ, ಕಣ್ಣೂರಹಳ್ಳಿ.
  • ಹಿರಿಯೂರು-ಸೋಮೇರಹಳ್ಳಿ, ಕೃಷ್ಣಾಂಬುಧಿ, ಮ್ಯಾಕ್ಲೂರಹಳ್ಳಿ, ಯರದಕಟ್ಟೆ.
  • ಕನಕಪುರ-ಅಂಬೇಡ್ಕರ ನಗರ, ಹೌಸಿಂಗ್ ಬೋರ್ಡ್ ಕ್ವಾರ್ಟರ್ಸ್, ಮಾಧವ ನಗರ, ಕೆಇಬಿ ಕಾಲನಿ, ದೇಗುಲ ಮಠ, ಮಹಾರಾಜಕಟ್ಟೆ ಗ್ರಾಮ, ಶಿವನಹಳ್ಳಿ, ಕಸಬೆ, ಕಲ್ಲಹಳ್ಳಿ.
  • ಮುಳಬಾಗಿಲು- ಇಂಡ್ಲಕೆರೆ, ವಿಠಲಪುರ
  • ಶಿಡ್ಲಘಟ್ಟ-ಗಾಂಧಿನಗರ, 1,2 ಮತ್ತು 3ನೇ ಕಾರ್ಮಿಕ ನಗರ, ಆಜಾದ್‌ನಗರ, ಖಾಸಿಂ ಪಾಳ್ಯ, ಮೆಹಬೂಬ್‌ನಗರ
  • ಅರಸೀಕೆರೆ-ಅರಸೀಕೆರೆ ಕಸಬಾ, ಕಾಳನಕೊಪ್ಪಲು, ಬಣಜಾರ ತಾಂಡ್ಯ, ಹೆಂಜಗೊಂಡನಹಳ್ಳಿ, ಗುಂಡುಕಾನಹಳ್ಳಿ.
  • ಉಳ್ಳಾಲ-ಉಳ್ಳಾಲ, ಪೆರ್ಮನ್ನೂರು
  • ಸುರಪುರ-ಹಸನಪುರ, ತಲವಾರಗೇರಾ, ವನಕಿಹಾಳ, ಖಾನಾಪುರ, ಕವಡಿಮಟ್ಟಿ, ನರಸಿಂಗಪೇಟೆ, ದೇವಿಕೇರೆ
  • ಹುಕ್ಕೇರಿ-ಗಜಬರವಾಡಿ, ಜಾಬಾಪುರ
  • ಸದಲಗಾ-ಬೈನಕದಾಡಿ, ವಡಗೋಲ
  • ಪಾಂಡವಪುರ-ಪಾಂಡವಪುರ ಹಿರೋಡೆ, ಬೀರಶೆಟ್ಟಿಹಳ್ಳಿ, ಶಾಂತಿನಗರ, ಕೃಷ್ಣಾನಗರ, ಎಚ್‌ಎಲ್‌ಬಿಸಿ ಕಾಲನಿ, ಹಾರೋಹಳ್ಳಿ, ಹನುಮಂತನಗರ ಎ ಬ್ಲಾಕ್, ಮಹಾತ್ಮಗಾಂಧಿ ನಗರ ಬಿ ಬ್ಲಾಕ್, ಸುಭಾಷಚಂದ್ರ ನಗರ ಸಿ ಬ್ಲಾಕ್, ಬಸವೇಶ್ವನಗರ ಎಚ್ ಬ್ಲಾಕ್
  • ಟಿ.ನರಸೀಪುರ-ಆಲಗೂಡು, ಬೈರಾಪುರ, ತಿರಮಕೂಡಲಹಳ್ಳಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT