ಏರ್ ಏಷ್ಯಾ ಕ್ಯೂಝಡ್-8501 ವಿಮಾನ ನಿಗೂಢ ನಾಪತ್ತೆ
ಮಲೇಷ್ಯಾ ಎಂಹೆಚ್ 370 ಬೊಯಿಂಗ್ ವಿಮಾನ ನಿಗೂಢವಾಗಿ ಕಣ್ಮರೆಯಾದಂತೆ ಏರ್ ಏಷ್ಯಾ ಕಂಪನಿಗೆ ಸೇರಿದ ವಿಮಾನವೊಂದು ಭಾನುವಾರ ನಾಪತ್ತೆಯಾಗಿದೆ.
ಜಕಾರ್ತಾ: ಮಲೇಷ್ಯಾ ಎಂಹೆಚ್ 370 ಬೊಯಿಂಗ್ ವಿಮಾನ ನಿಗೂಢವಾಗಿ ಕಣ್ಮರೆಯಾದಂತೆ ಏರ್ ಏಷ್ಯಾ ಕಂಪನಿಗೆ ಸೇರಿದ ವಿಮಾನವೊಂದು ಭಾನುವಾರ ನಾಪತ್ತೆಯಾಗಿದೆ.
162 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಏಷ್ಯಾ ವಿಮಾನ ಇಂಡೋನೇಷ್ಯಾದ ಸುರಬಯಾ ಏರ್ಪೋರ್ಟ್ನಿಂದ 5.30ಕ್ಕೆ ಟೇಕ್ ಆಫ್ ಆಗಿದ್ದ ವಿಮಾನ 8.30ಕ್ಕೆ ಸಿಂಗಾಪುರಕ್ಕೆ ಬಂದಿಳಿಯಬೇಕಿತ್ತು. ಆದರೆ 9.30 ಕಳೆದು ವಿಮಾನ ನಿಲ್ದಾಣಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ವಿಮಾನ ರಾಡಾರ್ ಸಂಪರ್ಕ ಕಳೆದುಕೊಂಡಿರುವುದರಿಂದ ವಿಮಾನ ಎಲ್ಲಿದೆ ಎಂಬುದು ಸ್ಪಷ್ಟವಾಗಿಲ್ಲ. ದಟ್ಟ ಮಂಜು ಆವರಿಸಿರುವುದರಿಂದ ವಿಮಾನ ಪತನಗೊಂಡಿರುವ ಅಥವಾ ಉಗ್ರರು ವಿಮಾನವನ್ನು ಹೈಜಾಕ್ ಮಾಡಿರುವ ಶಂಕೆಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.