ಸಾಂದರ್ಭಿಕ ಚಿತ್ರ 
ದೇಶ

ದೆಹಲಿ ಜಗತ್ತಿನ 25ನೇ ಮೋಜಿನ ನಗರಿ

ಪ್ರಪಂಚದ ಅತ್ಯಂತ ಮೋಜಿನ ನಗರಗಳ ಪಟ್ಟಿಯಲ್ಲಿ ಭಾರತ ರಾಷ್ಟ್ರ ರಾಜಧಾನಿ...

ಲಂಡನ್: ಪ್ರಪಂಚದ ಅತ್ಯಂತ ಮೋಜಿನ ನಗರಗಳ ಪಟ್ಟಿಯಲ್ಲಿ ಭಾರತ ರಾಷ್ಟ್ರ ರಾಜಧಾನಿ ನವದೆಹಲಿಗೆ 25ನೇ ಸ್ಥಾನ ದೊರೆತಿದೆ.

ಜಗತ್ತಿನ ಮೋಜಿನ ನಗರಗಳ ಪಟ್ಟಿಯಲ್ಲಿ ದೆಹಲಿಗೆ 25ನೇ ಸ್ಥಾನ ಸಿಕ್ಕಿದ್ದು, ಈ ಪಟ್ಟಿಯ ಟಾಪ್ 25ರಲ್ಲಿ ಭಾರತದಿಂದ ಕೇವಲ ದೆಹಲಿ ಮಾತ್ರ ಸ್ಥಾನ ಪಡೆದಿದೆ. ಪ್ರಥಮ ಸ್ಥಾನದಲ್ಲಿ ಜರ್ಮನಿಯ ರಾಜಧಾನಿ ಬರ್ಲಿನ್ ವಿರಾಜಮಾನವಾಗಿದೆ.

ಪ್ರಪಂಚದ ಸುಮಾರು 1830 ನಗರಗಳನ್ನು ಆಯ್ಕೆ ಮಾಡಿಕೊಂಡು ಗೆಟ್ ಯುವರ್ ಓನ್ ಗೈಡ್ ಮತ್ತು ಗೋ ಯುರೋ ಪ್ರವಾಸಿ ಸಂಸ್ಥೆಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ಮೋಜಿನ ನಗರಿ ಪಟ್ಟಿಯನ್ನು ತಯಾರಿಸಿವೆ. ನಗರಗಳ ರಾತ್ರಿ ಜೀವನ, ಸರಾಸರಿ ಬಿಯರ್ ಬೆಲೆ, ಮನೋರಂಜನೆಗಿರುವ ಆಯ್ಕೆಗಳು ಮತ್ತಿತ್ತರ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆ ಮೂಲಕ ಮೋಜಿನ ನಗರ ಪಟ್ಟಿಯನ್ನು ತಯಾರಿಸಲಾಗಿದೆ.

ಜಗತ್ತಿನಲ್ಲೇ ಅತೀ ಹೆಚ್ಚು ಧಾರಾಳ ಬಾರ್ ಮತ್ತು ಸಂಗ್ರಹಾಲಯವಿರುವ ಬರ್ಲಿನ್‌ಗೆ ಮೊದಲ ಸ್ಥಾನ ಸಿಕ್ಕಿದೆ. ಲಂಡನ್, ಪ್ಯಾರಿಸ್, ನ್ಯೂಯಾರ್ಕ್ ಮತ್ತು ಟೋಕಿಯೊ ನಗರಗಳು ಟಾಪ್ 5ರ ಪಟ್ಟಿಯಲ್ಲಿದೆ.

ವಿವಿಧ ವಯಸ್ಸಿನ ಪ್ರವಾಸಿಗರಿಗೆ ಆಸಕ್ತಿದಾಯಕವಾಗಿರುವ ಮೋಜುಮಸ್ತಿ ಏನಿದೆ ಎಂಬುದರ ಮೇಲೆ ಮೋಜಿನ ನಗರದ ಸ್ಥಾನಮಾನ ನಿರ್ಧಾರವಾಗಿದೆ.

ಅದೇ ರೀತಿ, ವಯಸ್ಕರ ಮನೋರಂಜನೆ ವಿಭಾಗದಲ್ಲಿ ಬ್ಯಾಂಕಾಕ್ ಅಗ್ರಸ್ಥಾನದಲ್ಲಿ ಮತ್ತು ಟೋಕಿಯೊ ನಂತರದ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡುವುದಿಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video

ಹೀಗೂ ಉಂಟೆ?: BJP ಶಾಸಕನ ಬಂಗಲೆ ತೊಳೆಯಲು ಹೋದ ಅಗ್ನಿಶಾಮಕ ವಾಹನ; ವಿಡಿಯೋ ವೈರಲ್‌ ಬೆನ್ನಲ್ಲೇ ₹2,700 ದಂಡ!