ನವದೆಹಲಿ: ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ)ಯನ್ವಯ ಸಲ್ಲಿಸಲಾದ ಅರ್ಜಿಗೆ ಉತ್ತರಿಸುವಾಗ ನಿರ್ದಿಷ್ಟ ನಮೂನೆಯನ್ನೇ ಬಳಸಬೇಕಾದ ಅಗತ್ಯವಿಲ್ಲ. ಆದರೆ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಅರ್ಜಿಗೆ ಉತ್ತರ ನೀಡುವಾಗ ಕಡ್ಡಾಯವಾಗಿ ಇ-ಮೇಲೆ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕು.
ಹೀಗೆಂದು ಸರ್ಕಾರ ನೇಮಕ ಮಾಡಿರುವ ಮೂವರು ಸದಸ್ಯರ ಸಮಿತಿ ಹೇಳಿದೆ. ಆರ್‌ಟಿಐ ಉತ್ತರಗಳಿಗೆ ಹೊಸ ನಮೂನೆ ಬಳಸುವ ವಿಚಾರದಲ್ಲಿ ಶಿಫಾರಸು ಮಾಡಲೆಂದು ಸರ್ಕಾರವು ಈ ಸಮಿತಿಯನ್ನು ರಚಿಸಿತ್ತು.
ಈ ಬಗ್ಗೆ ಸಲಹೆ ನೀಡುರವ ಸಮಿತಿಯು, ಆರ್‌ಟಿಐ ಅರ್ಜಿಗಾಗಲೀ, ಉತ್ತರಕ್ಕಾಗಲೀ ನಿಗದಿತ ನಮೂನೆಯೇ ಬಳಸಬೇಕೆಂದು ಕಡ್ಡಾಯಗೊಳಿಸಬೇಕಿಲ್ಲ. ಆರ್‌ಟಿಐ ಕಾಯ್ದೆಯಲ್ಲಿ ಅಂತಹ ನಿಬಂಧನೆಗಳೂ ಇಲ್ಲ ಎಂದಿದೆ. ಆದರೆ, ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳು(ಸಿಪಿಐಒ) ಪಾಲಿಸಬೇಕಾದ ಕೆಲವು ಕಡ್ಡಾಯ ನಿಯಮಗಳನ್ನು ಸಮಿತಿ ಉಲ್ಲೇಖಿಸಿದೆ.
ಸಮಿತಿ ಸಲಹೆಗಳೇನು?