ಸಾಮೂಹಿಕ ಅತ್ಯಾಚಾರ(ಸಾಂದರ್ಭಿಕ ಚಿತ್ರ) 
ದೇಶ

ಚಲಿಸುವ ಕಾರಿನಲ್ಲಿ ವಿಧವೆ ಮೇಲೆ ಸಾಮೂಹಿಕ ಅತ್ಯಾಚಾರ

ಗಾಜಿಯಾಬಾದ್: ವಿಧವೆ ಮಹಿಳೆಯೊಬ್ಬರಿಗೆ ಅಮಲೇರಿಸುವ ಪದಾರ್ಥ ತಿನ್ನಿಸಿ ಚಲಿಸುತ್ತಿದ್ದ ಕಾರಿನಲ್ಲಿ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಮುರಾದ್‌ನಗರ್ ಎಂಬಲ್ಲಿ ನಡೆದಿದೆ.

40 ವರ್ಷದ ವಿಧವೆ ಮೇಲೆ ಅತ್ಯಾಚಾರವೆಸಗಿದ ಮೂವರು ದುಷ್ಕರ್ಮಿಗಳು ಈ ದುಷ್ಕೃತ್ಯ ಎಸಗಿದ್ದು, ಬಳಿಕ ಆಕೆಯನ್ನು ಗಂಗಾ ಕಾಲುವೆ ಬಳಿ ಎಸೆದು ಹೋಗಿದ್ದಾರೆ. ಅಸ್ವಸ್ಥಳಾಗಿ ಬಿದ್ದಿದ್ದ ಆಕೆಯನ್ನು ನೋಡಿದ ಗಸ್ತು ತಿರುಗುತ್ತಿದ್ದ ಪೊಲೀಸರು ನಂತರ ಮುರಾದ್‌ನಗರ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ. ಬಳಿಕ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು.

ವಿಧವೆಯಾಗಿರುವ ಮಹಿಳೆಗೆ ಮೂವರು ಮಕ್ಕಳಿದ್ದು, ಮೀರತ್ ರಸ್ತೆ ಬಳಿ ಇರುವ ತನ್ನ ಮನೆಯ ಬಳಿಯಲ್ಲಿ ಹಣ್ಣು ಮತ್ತು ತರಕಾರಿಯ ಪುಟ್ಟ ಅಂಗಡಿಯನ್ನು ನಡೆಸುತ್ತಿದ್ದಳು.

ಮುರಾದ್‌ನಗರ ಪೊಲೀಸರು ಮೂವರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಅವರಲ್ಲಿ ಇಬ್ಬರನ್ನು ಪೀಡಿತೆ ಗುರುತಿಸಿದ್ದು, ಅದರಲೊಬ್ಬ ಸಂಜಯ್ ನಗರದ ನಿವಾಸಿ ವಕೀಲ್ ಮತ್ತೊಬ್ಬ ಇರ್ಫಾನ್ ಎಂದು ತಿಳಿದುಬಂದಿದೆ. ಘಟನೆ ನಂತರ ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ.

ಆರೋಪಿ ವಕೀಲ್ ಹೊಟೇಲ್ ನಡೆಸುತ್ತಿದ್ದ ಹೀಗಾಗಿ ಮಹಿಳೆ ಆತನ ಹೊಟೇಲ್‌ನಿಂದ ಊಟವನ್ನು ತರುತ್ತಿದ್ದರಿಂದ ಇಬ್ಬರ ನಡುವೆ ಪರಿಚಯವಿತ್ತು. ಕಷ್ಟದ ಜೀವನ ನಡೆಸುತ್ತಿದ್ದ ಮಹಿಳೆಗೆ ಕೆಲಸ ಕೊಡಿಸುವುದಾಗಿ ಹೇಳಿ ಸುಮಾರು 2.30ರ ಸಮಯದಲ್ಲಿ ಮುರಾದ್‌ನಗರದಲ್ಲಿ ನನ್ನನ್ನು ಭೇಟಿಯಾಗುವಂತೆ ಹೇಳಿದ್ದ. ಮಹಿಳೆಗೂ ಬರುವುದಕ್ಕು ಮುನ್ನ ವಕೀಲ್ ಕಾರೊಂದನ್ನು ತಂದು ಆಕೆಗಾಗಿ ಕಾಯುತ್ತಿದ್ದರು. ಆ ಸಮಯದಲ್ಲಿ ಕಾರಿನಲ್ಲಿ ಇರ್ಫಾನ್ ಮತ್ತು ಮತ್ತೊಬ್ಬ ಅಪರಿಚಿತ ಆರೋಪಿನಲ್ಲಿದ್ದು, ಆಕೆಯನ್ನು ಕಾರಿನಲ್ಲಿ ಹತ್ತಿಸಿಕೊಂಡ ಆರೋಪಿಗಳು ಆಕೆಗೆ ಮತ್ತೇರಿಸುವ ಪದಾರ್ಥಗಳನ್ನು ಬೆರೆಸಿದ ತಂಪು ಪಾನೀಯವನ್ನು ನೀಡಿ, ಪ್ರಜ್ಞಾಹೀನಳಾದ ಆಕೆಯ ಮೇಲೆ ಆರೋಪಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಮುರಾದ್‌ನಗರ ಪೊಲೀಸ್ ಠಾಣಾಧಿಕಾರಿ ಆರ್.ಪಿ ಶರ್ಮಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT