ದೇಶ

10 ಸೆಕೆಂಡ್ ಚುಂಬನದಲ್ಲಿ 80 ಮಿಲಿಯನ್ ಬ್ಯಾಕ್ಟೀರಿಯಾ ಹರಡುತ್ತದೆ!

Vishwanath S

ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಲಿಪ್ ಲಾಕ್ ಅನ್ನೋದು ಕಾಮನ್ ಆಗಿಬಿಟ್ಟಿದೆ. ಇದೀಗ ಭಾರತಕ್ಕೂ ಇಂತಹ ಸಂಸ್ಕೃತಿ ಪಸರಿಸಿದ್ದು, ಬಾಲಿವುಡ್ ಸಿನಿಮಾಗಳಲ್ಲಿ ಇಂತಹ ಚುಂಬಕ ದೃಶ್ಯಗಳು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಆದರೆ ಲಿಪ್ ಲಾಕ್ ಮಾಡುವವರಲ್ಲಿ ಭಯಾನಕ ಬ್ಯಾಕ್ಟೀರಿಯಾಗಳು ವಿನಿಮಯವಾಗುತ್ತದೆ ಎನ್ನುತ್ತಿದೆ ಅಧ್ಯಯನ ಒಂದು.

ಹುಡುಗ-ಹುಡುಗಿಯರು ತುಟಿಗೆ ಮುತ್ತಿಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಆದರೆ ಚುಂಬನದ ಸಂರ್ದಭದಲ್ಲಿ ತುಟಿಗೆ ತುಟಿ ಸೇರಿಸುವುದರ ಜತೆ ನಾಲಿಗೆ, ಎಂಜಲು ಎಲ್ಲದರ ಮಿಶ್ರವಾಗುತ್ತವೆ. ಈ ವೇಳೆ ಒಬ್ಬರಿಂದ ಮತ್ತೊಬ್ಬರಿಗೆ ಬ್ಯಾಕ್ಟೀರಿಯಾಗಳು ಸಲೀಸಾಗಿ ರವಾನೆಯಾಗುತ್ತದೆ. 10 ಸೆಕೆಂಡ್ ಸತತವಾಗಿ ಲಿಪ್ ಲಾಕ್ ಮಾಡುವುದರಿಂದ 80 ಮಿಲಿಯನ್ ಬ್ಯಾಕ್ಟೀರಿಯಾ ರವಾನೆಯಾಗುತ್ತದೆ ಎಂಬ ಆಘಾತಕಾರಿ ಅಂಶ ಇದೀಗ ಬಹಿರಂಗಗೊಂಡಿದೆ.

ಸುಮಾರು 21 ಜೋಡಿಗಳನ್ನು ಈ ಅಧ್ಯಯನಕ್ಕೆ ಬಳಿಸಿಕೊಳ್ಳಲಾಗಿತ್ತು. ಆಮ್'ಸ್ಟರ್'ಡಮ್ನ ಮೈಕ್ರೋಪಿಯಾ ಮ್ಯಾಸಿಯಂನಲ್ಲಿ ನಡೆದ ಅಧ್ಯಯನದಲ್ಲಿ ಈ ಸತ್ಯ ಹೊರಬಿದ್ದಿದೆ. ಲಿಪ್ ಲಾಕ್ ಬಳಿಕ ಜೋಡಿಗಳ ಎಂಜಲಿನಲ್ಲಿ ಪ್ರೋಬಯೋಟಿಕ್ ಬ್ಯಾಕ್ಟೀರಿಯಾಗಳ ಪ್ರಮಾಣವನ್ನು ಲೆಕ್ಕ ಹಾಕಿರುವ ತಜ್ಞರು ಈ ನಿರ್ಧಾರಕ್ಕೆ ಬಂದ್ದಿದ್ದಾರೆ.

SCROLL FOR NEXT