ಮುಂಬೈ: 'ಬ್ರೇಕ್ ದ ಇಂಟರ್‌ನೆಟ್' ಎಂದು ನಗ್ನಳಾಗಿ ಪತ್ರಿಕೆಯೊಂದಕ್ಕೆ ಪೋಸ್ ನೀಡಿದ 34 ವರ್ಷದ ಕಿಮ್ ಕರ್ದಾಷಿಯನ್ ಇದೀಗ ಬಿಗ್‌ಬಾಸ್ 8ನೇ ಸಂಚಿಕೆಯಲ್ಲಿ ಭಾಗವಹಿಸಲಿದ್ದಾರಂತೆ. ಬಾಲಿವುಡ್ ನಟ ಸಲ್ಮಾನ್ ಖಾನ್ ನಿರೂಪಣೆಯ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಿಮ್ ಭಾರತಕ್ಕೆ ಬರುತ್ತಿದ್ದಾರಂತೆ.
ಸೆಕ್ಸ್ ಟೇಪ್‌ನಿಂದ ಖ್ಯಾತಿ ಪಡೆದು, ಇದೇ ಮೊದಲ ಬಾರಿಗೆ ಬರುತ್ತಿರುವ ಆಕೆ 'ನಮಸ್ತೆ ಇಂಡಿಯಾ...ನಾನು ಕಿಮ್ ಕರ್ಡಾಷಿಯನ್ ಬರುತ್ತಿದ್ದೇನೆ, ಬಿಗ್ ಬಾಸ್ ಮನೆಗೆ' ಎಂದು ಹಿಂದಿಯಲ್ಲಿ ಹೇಳಿಕೊಂಡಿದ್ದಾರೆ. ಈ ಹಿಂದೆ ಅಂತಾರಾಷ್ಟ್ರೀಯ ತಾರೆಯಪಾಗ ಪಮೇಲಾ ಆ್ಯಂಡರ್‌ಸನ್, ಸನ್ನಿ ಲಿಯೋನ್, ಜೇಡ್ ಗುಡಿ, ಕ್ರಿಕೆಟಿಗ ಆ್ಯಂಡ್ರು ಸೈಮಂಡ್ಸ್ ಕೂಡಾ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದರು.