ಗುಲಾಮಗಿರಿ 
ದೇಶ

ಆಧುನಿಕ ಗುಲಾಮಗಿರಿಗೆ ಭಾರತವೇ ನಂ.1

ಗುಲಾಮಗಿರಿ ನಿರ್ನಾಮವಾಗಿದೆ ಎಂದು ನೀವು ತಿಳಿದುಕೊಂಡಿದ್ದರೆ, ಅದು ತಪ್ಪು...

ನವದೆಹಲಿ: ಗುಲಾಮಗಿರಿ ನಿರ್ನಾಮವಾಗಿದೆ ಎಂದು ನೀವು ತಿಳಿದುಕೊಂಡಿದ್ದರೆ, ಅದು ತಪ್ಪು. ಇದು ಭಾರತದಲ್ಲಷ್ಟೇ ಅಲ್ಲ ವಿಶ್ವದಲ್ಲೇ ಚಾಲ್ತಿಯಲ್ಲಿದ್ದು, ಆಧುನಿಕತೆಯನ್ನು ನಾಚಿಸುವಂತೆ ಮಾಡಿದೆ. ಅಂದ ಹಾಗೆ, ಈ ಗುಲಾಮಗಿರಿಗೆ ವಿಶ್ವಾದ್ಯಂತ ತುತ್ತಾಗಿರುವ ಮಂದಿ ಎಷ್ಟು ಗೊತ್ತೇ? 3.5 ಕೋಟಿ!

ಇಲ್ಲಿ ಇನ್ನೊಂದು ಆಘಾತಕಾರಿ ಅಂಶವೆಂದರೆ, ಇದರಲ್ಲಿ ಭಾರತಕ್ಕೆ ಮೊದಲ ಸ್ಥಾನ. ಅಂದರೆ ಭಾರತದಲ್ಲಿ 1.40 ಕೋಟಿ ಗುಲಾಮರಿದ್ದಾರೆ. ಎರಡನೇ ಸ್ಥಾನವನ್ನು ಚೀನಾ ಪಡೆದುಕೊಂಡಿದ್ದು, 32 ಲಕ್ಷ ಜನ ಜೀತಕ್ಕಿದ್ದಾರೆ. ಕ್ರಮವಾಗಿ 3,4 ಮತ್ತು 5ನೇ ಸ್ಥಾನವನ್ನು ಪಾಕಿಸ್ತಾನ (20ಲಕ್ಷ), ಉಜ್‌ಬೇಕಿಸ್ತಾನ (10.2 ಲಕ್ಷ), ರಷ್ಯಾ (10 ಲಕ್ಷ) ಹೊಂದಿದೆ. ಇಂಥದ್ದೊಂದು ವರದಿಯನ್ನು ಆಸ್ಟ್ರೇಲಿಯಾ ಮೂಲದ ಎನ್‌ಜಿಒ ಪ್ರಕಟಿಸಿದೆ. ಇದಕ್ಕಾಗಿ ವಿಶ್ವದ 167 ದೇಶಗಳ ಅಧ್ಯಯ ನಡೆಸಲಾಗಿದೆ.  ಪ್ರಮುಖ ದೇಶಗಳಲ್ಲೇ ಶೇ.61 ಕ್ಕೂ ಹೆಚ್ಚು ಮಂದಿ ಗುಲಾಮಗಿರಿಗೆ ತುತ್ತಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೇ ನೈಜಿರಿಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಇಂಡೋನೇಷ್ಯಾ, ಬಾಂಗ್ಲಾದೇಶ ಮತ್ತು ಥಾಯ್ಲಾಂಡ್‌ನಲ್ಲೂ ಈ ಪದ್ಧತಿ ಹೆಚ್ಚಾಗಿ ಚಾಲ್ತಿಯಲ್ಲಿದೆ. ಇದನ್ನು ಆಧುನಿಕ 'ಗುಲಾಮಗಿರಿ' ಎಂದು ಕರೆಯಲಾಗಿದೆ.

ಇವರಲ್ಲಿ ಕೂಲಿ ಕಾರ್ಮಿಕರು, ಬಲವಂತದಿಂದ ಮದುವೆಯಾಗಿರುವವರು, ಸಾಲ ತೀರಿಸದೇ ಜೀತದಾಳಾಗಿರುವುದು, ವೇಶ್ಯಾವಾಟಿಕೆಯಲ್ಲಿ ಕಿರುಕುಳ ಅನುಭವಿಸುವವರೇ ಹೆಚ್ಚಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಶೇ. 23 ಹೆಚ್ಚಳವಾಗಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಇನ್ನೂ ನನಸಾಗಿಲ್ಲ ದಶಕಗಳ ಕನಸು: ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ, ಯೋಜನೆಗೆ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

SCROLL FOR NEXT