ಕಿಸಾನ್ ವಿಕಾಸ್ ಪತ್ರ ಕ್ಕೆ ಮರುಚಾಲನೆ
ನವದೆಹಲಿ: ಬಡವರಿಗೆ ಉಳಿತಾಯದ ಹಾದಿ ತೋರಿಸಿದ್ದ ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಮತ್ತೆ ಅವರ ಮಡಿಲು ಸೇರುತ್ತಿದೆ. ದೇಶದಲ್ಲಿ ಉಳಿತಾಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಕೆವಿಪಿ ಯೋಜನೆಯನ್ನು ಪುನರಾರಂಭಿಸಲಾಗಿದೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಕಳೆದ 2-3 ವರ್ಷಗಳಲ್ಲಿ ದೇಶದಲ್ಲಿ ಉಳಿತಾಯವು ಶೇ.36.8ರಿಂದ ಶೇ.30ಕ್ಕೂ ಕಡಿಮೆಗೆ ಇಳಿದಿದೆ. ಹಾಗಾಗಿ ಈಗ ಜನರಿಗೆ ಹೆಚ್ಚು ಉಳಿತಾಯ ಮಾಡುವಂತೆ ಉತ್ತೇಜಿಸುವುದು ಅನಿವಾರ್ಯ ಎಂದಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಕೆವಿಪಿ ಯೋಜನೆಗೆ ಮಂಗಳವಾರ ಮರುಚಾಲನೆ ನೀಡಿದ್ದಾರೆ.
ಕಿಸಾನ್ ವಿಕಾಸ ಪತ್ರ
- ಆರಂಭದಲ್ಲಿ ಇದನ್ನು ಅಂಚೆ ಕಚೇರಿಗಳಲ್ಲಿ ಮಾತ್ರವೇ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಶಾಖೆಗಳಲ್ಲಿಯೂ ಲಭ್ಯವಿರಲಿದೆ.
- ಕೆವಿಪಿಯಲ್ಲಿ ಉಳಿತಾಯ ಮೂಡುವವರು ಯಾವುದೇ ತೆರಿಗೆ ವಿನಾಯಿತಿ ಪಡೆಯುವುದಿಲ್ಲ.
- ಒಬ್ಬ ಹೆಸರಲ್ಲಿ ಅಥವಾ ಜಂಟಿಯಾಗಿ ಕಿಸಾನ್ ವಿಕಾಸ ಪತ್ರ ಸರ್ಟಿಫಿಕೇಟ್ ಪಡೆಯಬಹುದು. ಒಬ್ಬ ವ್ಯಕ್ತಿಯು ಇದನ್ನು ಮತ್ತೊಬ್ಬ ವ್ಯಕ್ತಿಗೆ ವರ್ಗಾಯಿಸುವ ಅವಕಾಶವೂ ಇದೆ.
- ಭಾರತದಲ್ಲಿನ ಯಾವುದೇ ಒಂದು ಅಂಚೆ ಕಚೇರಿಯಿಂದ ಮತ್ತೊಂದಕ್ಕೆ ವರ್ಗಾಯಿಸಬಹುದು.
- ಬ್ಯಾಂಕುಗಳಿಂದ ಸಾಲ ಪಡೆಯುವಾಗ ಕೆವಿಪಿ ಸರ್ಟಿಫಿಕೇಟ್ ಅನ್ನು ಭದ್ರತೆಯಾಗಿ ನೀಡಬಹುದು.
- ಮೊದಲು 1988ರಲ್ಲಿ ಇದನ್ನು ಆರಂಭಿಸಲಾಗಿತ್ತು. ಆಗ ಇದರ ಮೆಚ್ಯೂರಿಟಿ ಅವಧಿ ಐದೂವರೆ ವರ್ಷ ಆಗಿತ್ತು.
100 ತಿಂಗಳಲ್ಲಿ ದುಪ್ಪಟ್ಟು
ಅನುಕೂಲವೇನು?
- ಯಾರದೋ ವಂಚನೆಗೆ ಬಲಿಯಾಗುವ ಬದಲು, ವಿಶ್ವಾಸಾರ್ಹ ಸರ್ಕಾರಿ ಯೋಜನೆಯಲ್ಲಿ ಹಣವನ್ನು ತೊಡಗಿಸಲು ಸಾಧ್ಯವಾಗುತ್ತದೆ.
- ದೇಶದಲ್ಲಿ ಉಳಿತಾಯ ಹೆಚ್ಚಿಸುವ ತುರ್ತು ಅಗತ್ಯವಿದೆ. ಈ ಹಣವನ್ನು ನಂತರ ದೇಶ ಕಟ್ಟುವ ಕಾರ್ಯಕ್ಕೆ ಬಳಸಬಹುದು.
- ಇದು ಕೇವಲ ಬಡ್ಡಿಯನ್ನು ಆಕರ್ಷಿಸುವುದು ಮಾತ್ರವಲ್ಲ, ದೇಶದ ಅಭಿವೃದ್ಧಿಗೂ ನೆರವಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics