ಇಂದೋರ್: ತರಬೇತಿ ನೀಡಲು ಬಳಸಲಾಗುತ್ತಿದ್ದ ವಿಮಾನವೊಂದು ಪತನಗೊಂಡಿದ್ದು, ವಿಮಾನದಲ್ಲಿದ್ದ ಇಬ್ಬರು ತರಬೇತುದಾರರಿಗೆ ಗಂಭೀರ ಗಾಯವಾಗಿದೆ.
ವಿಮಾನ ತರಭೇತಿ ನೀಡುವ ಸಲುವಾಗಿ ಸೆಸ್ನಾ 152 ವಿಮಾನವನನ್ನು ಬಳಸಿಕೊಳ್ಳಲಾಗುತ್ತಿತ್ತು. ವಿಮಾನ ಇಂದೋರ್ ಏರ್ಡ್ರೋಮ್ ನ ಗಡಿಯಲ್ಲೇ ಪತನ ಗೊಂಡಿದೆ ಆದರೆ ಹಾರುವ ಸಂದರ್ಭದಲ್ಲಿ ಪತನಗೊಂಡಿದೆಯೋ ಅಥವಾ ಇಳಿಯುವ ಸಂದರ್ಭದಲ್ಲಿ ಪತನಗೊಂಡಿದೆಯೋ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಮಾನ ಪತನದಿಂದ ಗಂಭೀರ ಗಾಯಗೊಂಡಿರುವ ತರಬೇತುದಾರರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.