ಶಾರುಖ್ ಖಾನ್ 
ದೇಶ

ಶಾರುಖ್ ಮೇಲೆ ಭೂಗತ ದೊರೆ ರವಿ ಪೂಜಾರಿ ಕಣ್ಣು: ಪೊಲೀಸ್

ಬಾಲಿವುಡ್ ಬಾದ್ ಶಾ ಶಾರುಖ್...

ಮುಂಬೈ: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ರನ್ನು ಪಾತಕಿಗಳು ಟಾರ್ಗೆಟ್ ಮಾಡಿದ್ದಾರೆಂಬ ಆಘಾತಕಾರಿ ಸುದ್ದಿಯನ್ನು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಬಿಚ್ಚಿಟ್ಟಿದ್ದಾರೆ.

ಮುಂಬೈನ ಕ್ರೈಂ ಬ್ರ್ಯಾಂಚ್ ಪೊಲೀಸರು ಸೋಮವಾರ 7 ಮಂದಿ ಪಾತಕಿಗಳನ್ನು ಬಂಧಿಸಿದ್ದು, ಅವರನ್ನು ವಿಚಾರಣೆಗೊಳಪಡಿಸಿದಾಗ ಬಾಲಿವುಡ್ ಬಾದಾ ಶಾ ಶಾರುಖ್ ಖಾನ್ ಸೇರಿದಂತೆ ಖ್ಯಾತ ನಿರ್ಮಾಪಕ ಮಹೇಶ್ ಭಟ್, ಕೊರಿಯಾಗ್ರಾಫರ್ ಹಾಗೂ ನಿರ್ದೇಶಕಿ ಫರ್ಹಾ ಖಾನ್ರ ಮೇಲೆ ಭೂಗತ ದೊರೆ ರವಿ ಪೂಜಾರಿ ಗ್ಯಾಂಗಿನವರು ಕಣ್ಣಿಟ್ಟಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ಹೊರಹಾಕಿದ್ದಾರೆ.

ಕಳೆದ ಆಗಸ್ಟ್ ತಿಂಗಳಿನಲ್ಲಿ ಶಾರುಖ್ರ ಹ್ಯಾಪಿ ನ್ಯೂ ಇಯರ್ ಚಿತ್ರ ಸೇರಿ 7 ಚಿತ್ರಗಳ ವಿತರಣೆ ಹಕ್ಕು ಪಡೆದ್ದಿದ್ದ ಚಿತ್ರ ನಿರ್ಮಾಪಕ, ಕರೀಮ್ ಮೊರಾನಿ ಅವರ ಬಂಗಲೆಯ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಇದೇ ವೇಳೆಗೆ ಶಾರುಖ್ ಅವರ ರೆಡ್ ಚಿಲ್ಲೀಸ್ ಕಚೇರಿ ಮೇಲೆ ದಾಳಿ ನಡೆಸುವ ಸಂಚು ವಿಫಲವಾಗಿತ್ತು.

ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕರಾಗಿರುವ ಮಹೇಶ್ ಭಟ್ ಹಾಗೂ ಅವರ ಇಡೀ ಕುಟುಂಬದ ನಾಶಕ್ಕೆ ಭೂಗತ ದೊರೆ ರವಿ ಪೂಜಾರಿ ಶಿಷ್ಯಂದಿರು ಮುಂದಾಗಿದ್ದರು ಎಂಬುದನ್ನು ಈ ಬಂಧಿತ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ. ಕಳೆದ 2 ತಿಂಗಳಿನಿಂದ ಮಹೇಶ್ ಭಟ್ ಅವರ ಮನೆ ಹಾಗೂ ಕಚೇರಿ ಮೇಲೆ ಕಣ್ಣಿಟ್ಟಿದ್ದೇವು ಎಂದು ಪಾತಕಿಗಳು ತಿಳಿಸಿದ್ದಾರೆ.

ಶಾರುಖ್ ಖಾನ್, ಫರ್ಹಾ ಖಾನ್, ಮಹೇಶ್ ಭಟ್ ಸೇರದಂತೆ ಪ್ರಮುಖ ಬಾಲಿವುಡ್ ಗಣ್ಯರ ಹತ್ಯೆಗೂ ಸಂಚು ಮಾಡಿದ್ದೇವು. ಆದರೆ, ಖಾರ್ ಪ್ರದೇಶದಲ್ಲಿ ನಮ್ಮ ಚಲನವಲನದ ಬಗ್ಗೆ ಮಾಹಿತಿ ಸೋರಿಕೆಯಾಗಿದ್ದರಿಂದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದೇವೆ ಎಂದು ಆರೋಪಗಿಳು ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT