ದೇಶ

ರಾಂಪಾಲ್ ಆಶ್ರಮದಲ್ಲಿ ಬುಲೆಟ್ ಪ್ರೂಫ್ ಕಾರ್ ಪತ್ತೆ

Mainashree

ಚಂಡಿಗಢ: ಸ್ವಯಂಘೋಷಿತ ದೇವಮಾನವ ಬಾಬಾ ರಾಂಪಾಲ್ ಆಶ್ರಮದಲ್ಲಿ ಬುಲೆಟ್ ಪ್ರೂಫ್ ಕಾರ್ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೊಲೆಗೆ ಕುಮ್ಮಕ್ಕು ನೀಡಿದ ಪ್ರಕರಣದಡಿ ಬಂಧನಕ್ಕೀಡಾಗಿರುವ ಬಾಬಾ ರಾಂಪಾಲ್ ಆಶ್ರಮದಲ್ಲಿ ಪೊಲೀಸರ ಶೋಧಕಾರ್ಯದ ವೇಳೆ ಆಶ್ರಮದಲ್ಲಿ ಬುಲೆಟ್ ಪ್ರೂಫ್ ಕಾರ್ ಪತ್ತೆಯಾಗಿದೆ.

ನಿನ್ನೆಯಷ್ಟೇ ಆಶ್ರಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಇಂದು ಶೋಧಾ ಕಾರ್ಯ ಮುಂದುವರೆಸಲಾಗಿದ್ದು, ಕಾರ್ಯಾಚರಣೆ ವೇಳೆ ಎಣ್ಣೆ ಟ್ಯಾಂಕರ್, ಎರಡು ಟ್ರ್ಯಾಕ್ಟರ್, ಮಾರುತಿ ಜಿಪ್ಸಿ ಸೇರಿದಂತೆ ಬುಲೆಟ್ ಪ್ರೂಫ್ ಕಾರ್ ಪತ್ತೆಯಾಗಿದೆ.

ಬಾಬಾ ರಾಂಪಾಲ್ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಹರ್ಯಾಣದ ವಿಶೇಷ ತನಿಖಾ ತಂಡ(ಎಸ್‌ಐಟಿ) ಆಶ್ರಮದ ಮೂಲೆ ಮೂಲೆಯಲ್ಲಿ ಶೋಧಕಾರ್ಯ ಮುಂದುವರೆಸಿದೆ ಎಂದು ತಿಳಿದು ಬಂದಿದೆ.

SCROLL FOR NEXT