ದೇಶ

ಭಾರತದಲ್ಲಿ ವರ್ಷಕ್ಕೆ 3,00,000ಶಿಶುಗಳ ಸಾವು!

Lakshmi R

ಭಾರತೀಯ ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ ಕಂಡರೂ ನವಜಾತ ಶಿಶುಗಳು ಸಾಯುವುದು ಕಡಿಮೆಯಾಗಿಲ್ಲ. ಆದರೆ ಆಧುನಿಕ ತಂತ್ರಜ್ಞಾನದ ಮೂಲಕ ಶಿಶುಗಳ ಸಾವನ್ನು ತಡೆಯಬಹುದು.

2010ರಲ್ಲಿ ಮೃತಪಟ್ಟ ನವಜಾತ ಶಿಶುಗಳು
* 13ಲಕ್ಷ(ಬೇರ್ಯಾವ ದೇಶಗಳಲ್ಲೂ ಇಷ್ಟು ಮಕ್ಕಳು ಸತ್ತಿಲ್ಲ!)
* ಜನಿಸಿದ 1 ದಿನದಲ್ಲೇ ಮೃತಪಟ್ಟ ಶಿಶುಗಳು 3.00.000
* ಉತ್ತಮ ತಂತ್ರಜ್ಞಾನದಿಂದ ಸರಿಸುಮಾರು ಶೇ.75ರಷ್ಟು ಸಾವನ್ನು ತಡೆಯಬಹುದು


ಭಾರತದಲ್ಲಿ 5 ವರ್ಷಕ್ಕಿಂತ ಎಳೆಯ ಮಕ್ಕಳು ಸಾಯಲು ಕಾರಣ(ಶೇ.)
* ಅಕಾಲಿಕ ಜನನ - 27
* ಇತರೆ ಕಾಯಿಲೆಗಳು - 16
* ಶ್ವಾಸಕೋಶದ ಸೋಂಕು -14
* ಜನಿಸಿದ ಕೂಡಲೇ ಉಸಿರುಗಟ್ಟುವಿಕೆ - 11
* ಭೇಧಿ - 11
* ಕೀವು ತುಂಬಿದ ಹುಣ್ಣು - 8
* ಜನ್ಮಜಾತ ಅಸಹಜತೆಗಳು - 6
* ಏಟು/ಗಾಯಗಳು - 4
* ದಡಾರದ ಗುಳ್ಳೆಗಳು - 2


ಎಳೆ ಹಸುಗೂಸುಗಳ ಜೀವವನ್ನು ತಂತ್ರಜ್ಞಾನ ಮೂಲಕ ರಕ್ಷಿಸುವುದು ಹೇಗೆ?
ಭಾರತದ ನೆರವಿನಿಂದ ವಿಶ್ವಸಂಸ್ಥೆ ರಚಿಸಿದ ಸಹಸ್ರಮಾನದ ಅಭಿವೃದ್ಧಿ ಗುರಿಗಳು

* ಕಡು ಬಡತನ ನಿವಾರಣೆ, ಹಸಿವು ನೀಗಿಸುವುದು
* ಮಕ್ಕಳ ಮರಣದ ಸಂಖ್ಯೆಯಲ್ಲಿ ಇಳಿತ
* ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ
* ತಾಯಿಯ ಆರೋಗ್ಯ ವೃದ್ಧಿ
* ಎಚ್‌ಐವಿ/ಏಡ್ಸ್, ಮಲೇರಿಯಾ ವಿರುದ್ಧ ಹೋರಾಟ
* ಲಿಂಗ ಸಮಾನತೆಗೆ ಪ್ರೋತ್ಸಾಹ ಮತ್ತು ಸ್ತ್ರೀಯರ ಸಬಲೀಕರಣ
* ಪರಿಸರ ಸಂರಕ್ಷಣೆ
* ಅಭಿವೃದ್ಧಿಗಾಗಿ ಜಾಗತಿಕ ಸಹಭಾಗಿತ್ವ


ತಂತ್ರಜ್ಞಾನದ ನೆರವಿನಿಂದ ಮಕ್ಕಳ ಮತ್ತು ತಾಯಿಯ ಸಾವನ್ನು ತಡೆಯಬಲ್ಲ ವಿಧಾನಗಳು

1. ಲಲಬೈ ಎಲ್‌ಇಡಿ ಫೋಟೊಥೆರಪಿ ಸಿಸ್ಟಂ:
ವಿದ್ಯುತ್ ಕಡಿತವಾದಾಗ ಉಂಟಾಗುವ ವೋಲ್ಟೇಜ್ ಏರಿಳಿತವನ್ನು ತಡೆಯಬಲ್ಲದು.
ಧೂಳು ಮಾಲಿನ್ಯ ತಡೆಯಬಲ್ಲದು.
ನವಜಾತ ಶಿಶುಗಳ ಕಾಮಾಲೆಗೆ ಚಿಕಿತ್ಸೆ ನೀಡಬಲ್ಲದು.

2. ಲಲಬೈ ವಾರ್ಮರ್:
ಮೈಕ್ರೋ ಪ್ರೊಸೆಸರ್ ತಂತ್ರಜ್ಞಾನ ಬಳಸಿ ಮಗುವಿನ ಹಾಸಿಗೆಯ ಶಾಖವನ್ನು ಹತೋಟಿಯಲ್ಲಿ ಇಡಬಲ್ಲದು.
ವಿದ್ಯುತ್‌ನಲ್ಲಿ ಏರಿತವಾದಾಗ ಸೂಚನೆ ನೀಡಬಲ್ಲದು.
ಭಾರತೀಯ ಮಾರುಕಟ್ಟೆಗೆಂದು ತಯಾರಿಸಲಾದ ಈ ವಾರ್ಮರ್ ಇದೀಗ 72 ದೇಶಗಳಲ್ಲಿ ಲಭ್ಯ.

3. ಒಬಿ/ಜಿವೈಎನ್:
ಶ್ರವಣಾತೀತ ತಂತ್ರಜ್ಞಾನದಿಂದ ಗರ್ಭಾಶಯದ ಸಮಸ್ಯೆ ಪತ್ತೆ ಹಚ್ಚಬಲ್ಲದು.

4. ಲಲಬೈ ವಾರ್ಮರ್ ಪ್ರೈಂ:
ಅನಕ್ಷರಸ್ಥರಿಗೆ, ಗ್ರಾಮೀಣ ಪ್ರದೇಶದವರಿಗೆ ಬಳಸಲು ಸುಲಭವಾಗಲು ಚಿತ್ರಗಳ ಮೂಲಕ ನಿರ್ದೇಶನಗಳು ನೀಡಲಾಗಿದೆ.
ಪ್ರಮಾಣ ದರಕ್ಕಿಂತ ಶೇ.70 ಅಗ್ಗ.
ಕಡಿಮೆ ವಿದ್ಯುತ್ ಬಳಕೆ.

SCROLL FOR NEXT