ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ (ಸಂಗ್ರಹ ಚಿತ್ರ) 
ದೇಶ

ಚೀನಾ ವಿರುದ್ಧ ಮೋದಿ ವ್ಯೂಹ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರನ್ನು 66ನೇ ಗಣರಾಜ್ಯೋತ್ಸ...

ನವದೆಹಲಿ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರನ್ನು 66ನೇ ಗಣರಾಜ್ಯೋತ್ಸವಕ್ಕೆ ಆಮಂತ್ರಿಸುವ ಮೂಲಕ ಜಗತ್ತೇ ಭಾರತದತ್ತ ನಿಬ್ಬೆರಗಾಗಿ ನೋಡುವಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ.

ಇದರ ಹಿಂದೆ ಅತಿ ದೊಡ್ಡ ತಂತ್ರಗಾರಿಕೆ ಅಡಗಿದೆ. ಬಲಿಷ್ಠ ಸೇನೆ ಮುಂದಿಟ್ಟುಕೊಂಡು ಏಷ್ಯಾದಲ್ಲಿ ಚೀನಾ ನಡೆಸುತ್ತಿರುವ ಹೊಸ ವ್ಯೂಹಾತ್ಮಕ ಆಟಕ್ಕೆ ಸರಿಯಾದ ಟಾಂಗ್ ನೀಡಲು ಹೊರಟಿದ್ದಾರೆ ಮೋದಿ. ಭಾರತದ ಹಳೆಯ ಮಿತ್ರಾ ರಷ್ಯಾ ಈಗ ಚೀನಾದತ್ತ ವಾಲುತ್ತಿದೆ. ಆದರೆ ಈಗ ದೇಶದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಚೀನಾಕ್ಕೆ ಪ್ರತಿತಂತ್ರ ಹಣೆಯಲು ಎಲ್ಲ ರೀತಿಯಲ್ಲೂ ಈ ಸರ್ಕಾರ ಶಕ್ತವಾಗಿದೆ. ಮೋದಿ ಬಿಡುವಿಲ್ಲದೆ ವಿದೇಶಿ ಪ್ರವಾಸ, ಜಪಾನ್, ಅಮೆರಿಕ ಹಾಗೂ ಆಸ್ಟ್ರೇಲಿಯಾ ಭೇಟಿ ಈ ಪ್ರತಿತಂತ್ರದ ಭಾಗವೇ ಆಗಿದೆ. ಈವರೆಗೆ ಅಮೆರಿಕದ ಯಾವೊಬ್ಬ ನಾಯಕನನ್ನೂ ಗಣರಾಜ್ಯೋತ್ಸವದ ಅತಿಥಿಯನ್ನಾಗಿ ಆಹ್ವಾನಿಸಿರಲಿಲ್ಲ.

1958ರಲ್ಲಿ ಚೀನಾ, ಪಾಕಿಸ್ತಾನ, ರಷ್ಯಾ, ಬ್ರಿಟನ್, ಫ್ರಾನ್ಸ್ ಮತ್ತಿತ್ತರ ಮುಖಂಡರನ್ನು ಭಾರತವು ಆಹ್ವಾನಿತ್ತು.  ಆದರೆ ಈಗ ಇದೇ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರೊಬ್ಬರು ಗಣರಾಜ್ಯೋತ್ಸವದ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಇದು ವಿಶ್ವದ ಕುರಿತು ಭಾರತದ ದೃಷ್ಟಿಕೋನದಲ್ಲಿ ಆಗುತ್ತಿರುವ ಮಹತ್ವದ ಬದಲಾವಣೆಗೂ ಸಾಕ್ಷಿ. ಅದೇ ರೀತಿ ಭಾರತದ ಕುರಿತ ವಿಶ್ವದ ಅಭಿಪ್ರಾಯವೂ ಬದಲಾಗುತ್ತಿದೆ.

ರಷ್ಯಾಗೂ ದಿಗಿಲು: ಅಮೆರಿಕದ ಮುಂದೆ ಮಂಕಾಗುತ್ತಿರುವ ಭಾರತದ ಹಳೆಯ ಮಿಲಿಟರಿ ಪಾಲುದಾರನಾದ ರಷ್ಯಾ ಅನಿವಾರ್ಯವಾಗಿ ಚೀನಾದತ್ತ ವಾಲಿತ್ತು. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವೃದ್ಧಿಸುತ್ತಿರುವ ಮೋದಿ ವರ್ಚಸ್ಸು ಹಾಗೂ ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ ಗಟ್ಟಿಗೊಳ್ಳುತ್ತಿರುವುದು ಈಗ ರಷ್ಯಾವನ್ನೂ ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಹಾಗಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈಗ ಭಾರತದ ಭೇಟಿಗೆ ತುದಿಗಾಲಲ್ಲಿ ನಿಂತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel