ದೇಶ

11 ರಾಷ್ಟ್ರಕ್ಕೆ ಇಸಿಸ್ ಸಂಘಟನೆ ವಿಸ್ತರಣೆ

Vishwanath S

ವಾಷಿಂಗ್ಟನ್: ದಶಕಗಳ ಹಿಂದೆ ಅಲ್ ಖೈದಾ ಅಮೆರಿಕವನ್ನೇ ನಡುಗಿಸಿತ್ತು. ಅದರ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ಹತವಾದ ಬಳಿಕ ಸಂಘಟನೆ ಕಳೆಗುಂದಿತ್ತು. ಇದೀಗ ಪ್ರವರ್ಧನಮಾನಕ್ಕೆ ಬಂದಿರುವ ಇಸಿಸ್ ಸಂಘಟನೆ ಅದನ್ನೂ ಮೀರಿಸಿದೆ.

ಸದ್ಯ ಬೆಳಕಿಗೆ ಬಂದಿರುವ ಮಾಹಿತಿ ಪ್ರಕಾರ ಪಾಕಿಸ್ತಾನ, ಫಿಲಿಪ್ಪೀನ್ಸ್, ಅಲ್ಜೀರಿಯಾ ಸೇರಿ 11(ಸಿರಿಯಾ-ಇರಾಕ್ ಸೇರಿ) ರಾಷ್ಟ್ರಗಳ ಉಗ್ರ ಸಂಘಟನೆಗಳ ಜತೆಗೆ ನಂಟು ಬೆಳೆಸಿಕೊಂಡಿದೆ. ಇಸ್ಲಾಮಿಕ್ ರಾಷ್ಟ್ರದ ಹೆಸರಿನಲ್ಲಿ ಸಿರಿಯಾ ಮತ್ತು ಇರಾಕ್ನಲ್ಲಿ ರಕ್ತಪಾತ ನಡೆಸುತ್ತಿರುವ ಇಸಿಸ್ ನರಮೇಧದ ಮೂಲಕವೇ ವಿಶ್ವಾದ್ಯಂತ ಸಾಕಷ್ಟು ಮುಸ್ಲಿಂ ಮೂಲಭೂತವಾದಿ ಸಂಘಟನೆಗಳನ್ನು ತನ್ನತ್ತ ಸೆಳೆಯುತ್ತಿದೆ.

ಟೆರರಿಸಂ ರಿಸರ್ಚ್ ಆ್ಯಂಡ್ ಅನಾಲಿಸಿಸ್ ಕನ್ಸೋರ್ಟಿಯಂನ ಸಂಪಾದಕೀಯ ನಿರ್ದೇಶಕಿ ವೆರ್ಯಾನ್ ಖಾನ್ ಪ್ರಕಾರ ವಿದೇಶಿ ಸಂಘಟನೆಗಳು ಇಸಿಸ್ಗೆ ಹಲವು ರೀತಿಯಲ್ಲಿ ಬೆಂಬಲ ನೀಡುತ್ತಿವೆ. ಮೊದಲನೆಯದಾಗಿ ಇಸಿಸ್ನ ಧ್ವಜ ಮತ್ತು ಚಿಹ್ನೆಯನ್ನು ಪ್ರದರ್ಶಿಸುವ ಮೂಲಕ, ಎರಡನೇಯದಾಗಿ ಇಸಿಸ್ ಪರ ಹೇಳಿಕೆಗಳನ್ನು ನೀಡುವ ಮೂಲಕ. ಆದರೆ, ಕೆಲವು ಉಗ್ರ ಸಂಘಟನೆಗಳು ಸಂಪೂರ್ಣ ನಿಷ್ಠೆ ಘೋಷಿಸಿವೆ. ಈ ಮೂಲಕ ಇವು ಇಸಿಸ್ನ ಅಧಿಕೃತ ವಿದೇಶಿ ನೆಲೆಯಾಗಿ ಪರಿವರ್ತನೆಯಾಗಿವೆ. ಇಸಿಸ್ ನಾಯಕ ಬಾಗ್ದಾದಿ ಕರೆಯಂತೆ ಈ ಸಂಘಟನೆಗಳು ಯಾವುದೇ ದುಷ್ಕೃತ್ಯ ಎಸಗಲೂ ಸಿದ್ಧವಾಗಿ ನಿಲ್ಲುತ್ತವೆ. ವಿಶೇಷವೆಂದರೆ ಈ ರೀತಿ ಇಸಿಸ್ಗೆ ಬೆಂಬಲವಾಗಿ ನಿಲ್ಲುತ್ತಿರುವ ಉಗ್ರ ಸಂಘಟನೆಗಳಲ್ಲಿ ಬಹುತೇಕ ಹಿಂದೆ ಅಲ್ ಖೈದಾ ಜತೆ ಇದ್ದವುಗಳೇ ಆಗಿವೆ.

12 ಸಂಘಟನೆಗಳು: ಇರಾಕ್ ಮತ್ತು ಸಿರಿಯಾ ಸೇರಿ ಒಟ್ಟು 12 ಉಗ್ರ ಸಂಘಟನೆಗಳು ಇಸಿಸ್ನ ಅಧಿಕೃತ ಬೆಂಬಲಿಗ ಸಂಘಟನೆಯಾಗಿ ಕೆಲಸ ಮಾಡುತ್ತಿವೆ. ಇವುಗಳಲ್ಲಿ ಕೆಲವು ದೊಡ್ಡ ಸಂಘಟನೆಗಳಾಗಿದ್ದರೆ, ಇನ್ನು ಕೆಲವು ಹೊಸ ಹಾಗೂ ಇತ್ತೀಚೆಗಷ್ಟೇ ಅಸ್ತಿತ್ವ ಪಡೆದ ಸಂಘಟನೆಗಳು.

ಎಲ್ಲೆಲ್ಲಿ ಸಂಘಟನೆ?
ಈಜಿಪ್ಟ್ - ಅನ್ಸಾರ್ ಬೇಯಿಟ್ ಅಲ್-ಮಕ್ದಿಸ್.
ಅಲ್ಜೀರಿಯಾ - ಜುಂದ್ ಅಲ್ ಖಿಲಾಫಾ.
ಲಿಬಿಯಾ -ಇಸ್ಲಾಮಿಕ್ ಯೂತ್ ಶುರಾ ಕೌನ್ಸಿಲ್
ಫಿಲಿಪ್ಪಿನ್ಸ್ -ಅಬು ಸಯ್ಯಾಫ್
ಇಸ್ರೇಲ್/ಗಾಝಾ -ಅನ್ಸಾರ್ ಬೀಯತ್ ಅಲ್ ಮಕ್ದಿಸ್
ಲೆಬನಾನ್ - ಫ್ರೀ ಸುನ್ನೀಸ್ ಆಫ್ ಬಾಲ್ದಿಕ್ ಬ್ರಿಗೇಡ್.
ಇಂಡೋನೇಷ್ಯಾ  - ಅಶೋರುತ್ ತುಹಿದ್ ಚಳವಳಿಯ ನಾಯಕ, ಉಗ್ರ ಅಬು ಬಕರ್ ಬಶೀರ್.
ಜೋರ್ಡಾನ್ - ಸನ್ಸ್ ಆಫ್ ದಿ ಕಾಲ್ ಫಾರ್ ತಾವ್ಹಿದ್ ಆ್ಯಂಡ್ ಜಿಹಾದ್.
ಪಾಕಿಸ್ತಾನ - ತೆಹ್ರೀಕ್-ಎ-ತಾಲಿಬಾನ್ ಸಂಘಟನೆಯಿಂದ ಹೊರಬಂದಿರುವ ಜುನಾ ದುಲ್ಲಾ, ತೆಹ್ರೀಕ್ನ ಕೆಲ ಮುಖಂಡರು, ತೆಹ್ರೀಕ್-ಇ-ಖಿಲಾಫತ್, ಜಮಾತ್ ಅಲ್ ಅಹ್ರಾರ್.

SCROLL FOR NEXT