ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಮುರಿದು ಬಿದ್ದಿರುವ ದ್ವಿಪಕ್ಷೀಯ ಮಾತಕತೆ ಪುನರಾರಂಭಕ್ಕೆ ಸಾರ್ಕ್ ಶೃಂಗ ವೇದಿಕೆಯಾಗುವ ಸಾಧ್ಯತೆ ಇದೆ. ಬುಧವಾರದಿಂದ ಆರಂಭವಗಾಲಿರುವ ಎರಡು ದಿನಗಳ 18ನೇ ಸಾರ್ಕ್ ಶೃಂಗದ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಔಪಚಾರಿಕವಾಗಿ ಅಲ್ಲದಿದ್ದರೂ ಅನೌಪಚಾರಿಕ ಮಾತುಕತೆ ನಡೆಸುವ ನಿರೀಕ್ಷೆ ಗರಿಗೆದರಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ಕ್ ರಾಷ್ಟ್ರಗಳ ಜತೆಗೆ ಆತ್ಮೀಯ ಮಾತುಕತೆಗೆ ಈಗಾಗಲೇ ಒಲವು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಜತೆಗೂ ಅವರು ಮಾತುಕತೆ ನಡೆಸಬಹುದು ಎನ್ನುವ ನಿರೀಕ್ಷೆ ಹುಟ್ಟಿದೆ. ಇದರ ಬೆನ್ನಲ್ಲೇ ಈಗ ನವಜಾ ಷರೀಫ್ ಕೂಡ ಭಾರತದ ಜತೆಗೆ ಮಾತುಕತೆಗೆ ನಾವು ಸಿದ್ಧ ಎಂದಿದ್ದಾರೆ. ಆದರೆ, ಸದ್ಯ ಎರಡೂ ರಾಷ್ಟ್ರಗಳು ಔಪಚಾರಿಕ ಮಾತುಕತೆ ಸಾಧ್ಯತೆ ತಳ್ಳಿಹಾಕಿವೆ.
ಈ ಬೆಳವಣಿಗೆಗಳ ನಡುವೆ ಕಠ್ಮಮಂಡುವಿನಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಪಾಕಿಸ್ತಾನದ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಮಾತುಕತೆ ನಡೆಸಿದ್ದಾರೆ.