ಕಠ್ಮಂಡು: 18ನೇ ಸಾರ್ಕ್ ಸಮ್ಮೇಳನದ ಕೊನೆಯ ದಿನವಾದ ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಮುಖಾಮುಖಿಯಾಗಿದ್ದು, ಪರಸ್ಪರ ಹಸ್ತಲಾಘವ ಮಾಡಿಕೊಂಡಿದ್ದಾರೆ.
ನೇಪಾಳದ ಧೂಳಿಖೇಲ್‌ನಲ್ಲಿ ಮುಖಾಮುಖಿಯಾಗಿ ಭೇಟಿಯಾದ ಉಭಯ ದೇಶಗಳ ನಾಯಕರು ಪರಸ್ಪರ ಹಸ್ತಲಾಘವ ಮಾಡಿದರಾದರೂ, ಯಾವುದೇ ಮಾತುಕತೆ ನಡೆಸಿಲ್ಲ ಎಂದು ಮೂಲಗಳು ತಿಳಿಸಿವೆ.
ನಿನ್ನೆ ಸಾರ್ಕ್ ಶೃಂಗದಲ್ಲಿ ಒಂದೇ ವೇದಿಕೆ ಹಂಚಿಕೊಂಡರು ಪ್ರಧಾನಿ ಮೋದಿ ಮತ್ತು ಷರೀಫ್ ಕನಿಷ್ಠ ಮುಖವನ್ನು ನೋಡಲು ಮುಂದಾಗಿರಲಿಲ್ಲ. ಮೂರು ಗಂಟೆಗಳ ಕಾರ್ಯಕ್ರಮದಲ್ಲಿ ಈ ಇಬ್ಬರು ನಾಯಕರು ಪರಸ್ಪರ ಔಪಚಾರಿಕವಾಗಿಯೂ ಗೌರವ ಸೂಚಿಸಿರಲಿಲ್ಲ.
ಇಂದು ಸಮ್ಮೇಳನದ ಕೊನೆಯ ದಿನವಾಗಿದ್ದು, ಮೋದಿ- ಷರೀಪ್ ಮುಖಾಮುಖಿಯಾದರು, ಯಾವುದೇ ಮಾತುಕತೆ ನಡೆಸದೇ ಇರುವುದು ಈ ಇಬ್ಬರು ನಾಯಕರ ನಡುವೆ ಅನೌಪಚಾರಿಕ ಮಾತುಕತೆ ನಿರೀಕ್ಷೆಯೂ ಸುಳ್ಳಾದಂತಿದೆ.