ದೇಶ

ವಾಟ್ಸಾಪ್ ಮೂಲಕ ಸಾಮೂಹಿಕ ನಕಲು: 30 ಮಂದಿ ಅರೆಸ್ಟ್!

Vishwanath S

ಹೈದರಾಬಾದ್: ವಾಟ್ಸಾಪ್, ಬ್ಲೂಟೂಥ್ ಬಳಸಿಕೊಂಡು ರೈಲ್ವೆ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಸಾಮೂಹಿಕ ನಕಲು ಮಾಡುತ್ತಿದ್ದ ಪ್ರಕರಣ ಹೈದರಾಬಾದ್ ನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ 30 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಲ್ಕಾಜಗಿರಿ ಪೊಲೀಸರು ಹಾಗೂ ಸೈಬರ್ ವಿಶೇಷ ಕಾರ್ಯಾಚರಣೆ ತಂಡ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸಾಮೂಹಿಕ ನಕಲು ಮಾಡುತ್ತಿರುವುದು ಬಯಲಿಗೆ ಬಂದಿದೆ.

ಮಲ್ಕಾಜಗಿರಿ ಡಿಸಿಪಿ ರಾಮ ರಾಜೇಶ್ವರಿ ಅವರ ಪ್ರಕಾರ, ಸಾಮೂಹಿಕ ನಕಲಿಗೆ ಪಾಲುದಾರರಾಗಿದ್ದ ಮಾಚೇಂದರ್ ರೇಲ್ವೆ ಅಧಿಕಾರಿಯಾಗಿದ್ದು ಇತನನ್ನು ಬಂಧಿಸಲಾಗಿದೆ. ಇತ ವಿದ್ಯಾರ್ಥಿಗಳಿಂದ ತಲಾ ಐದು ಲಕ್ಷ ರುಪಾಯಿ ವಸೂಲಿ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕಾಗಿ ಮಾಚೇಂದರ್ ತಂಡವೊಂದನ್ನು ರಚಿಸಿದ್ದ ಇದರಲ್ಲಿ ಲಿಯಾಸ್, ವರುಣ್, ಗಿರಿಧರ್, ವೆಂಕಟೇಶ್, ಅಶೋಕ್ ಮತ್ತು ಶ್ರೀನಿವಾಸ ಇದ್ದರು. ಈ ನಕಲಿ ರಾಕೆಟ್ ನಡೆಸುತ್ತಿದ್ದ ವ್ಯಕ್ತಿ ಅಜ್ಞಾತ ಸ್ಥಳದಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿರುವ ಕ್ಯಾಂಡಿಡೇಟ್‘ಗಳಿಂದ ವಾಟ್ಸಾಪ್ ಮೂಲಕ ಪ್ರಶ್ನೆಗಳನ್ನು ಸ್ವೀಕರಿಸುತ್ತಾನೆ. ಆ ಪ್ರಶ್ನೆಗಳನ್ನು ನುರಿತರಿಗೆ ಕಳುಹಿಸಿ ಉತ್ತರ ಪಡೆದು ಮತ್ತೆ ಅಭ್ಯರ್ಥಿಗಳಿಗೆ ಉತ್ತರ ಕಳಿಸುತ್ತಾನೆ.

ಬಂಧಿತರಿಂದ ಇನ್‘ಬಿಲ್ಟ್ ಸಿಮ್, ಲ್ಯಾಪ್ ಟಾಪ್, ಪ್ರಿಂಟರ್, ಇಯರ್ ಫೋನ್ಸ್ ಮತ್ತು 27 ಮೊಬೈಲ್‘ಗಳನ್ನ ವಶಕ್ಕೆ ಪಡೆಯಲಾಗಿದೆ.

SCROLL FOR NEXT