ಮೃತ ಭಾರತೀಯ ಟೆಕ್ಕಿ ಪಂಕಜ್ ಸಾ (ಫೋಟೋ ಕೃಪೆ: www.smh.com.au) 
ದೇಶ

ಫೋನ್ ಸಂಭಾಷಣೆಯಲ್ಲಿದ್ದ ಭಾರತೀಯ ಟೆಕ್ಕಿ ಬಾಲ್ಕನಿಯಿಂದ ಬಿದ್ದು ಸಾವು

ಭಾರತೀಯ ಐಟಿ ವಿಶ್ಲೇಷಕನಾಗಿ ಸಿಡ್ನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಮೂಲದ ಟೆಕ್ಕಿ ಪಂಕಜ್ ಸಾ ಅವರು ಪತ್ನಿಯೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ ಮೂರನೇ ಮಹಡಿಯಿಂದ ಬಿದ್ದು ಸಾವು...

ಮೆಲ್ಬರ್ನ್: ಭಾರತೀಯ ಐಟಿ ವಿಶ್ಲೇಷಕನಾಗಿ ಸಿಡ್ನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಮೂಲದಟೆಕ್ಕಿ ಪಂಕಜ್ ಸಾ(29) ಅವರು ಪತ್ನಿಯೊಂದಿಗೆಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಮೆಲ್ಬರ್ನ್ಮೆಕಾರಿ ಪಾರ್ಕ್ ನ ಅಪಾರ್ಟ್ ಮೆಂಟ್ ವೊಂದರಲ್ಲಿ ಗುರುವಾರ ನಡೆದಿದೆ.

ಮೃತ ಪಟ್ಟ ಭಾರತೀಯ ಮೂಲದ ಟೆಕ್ಕಿ ಪಂಕಜ್ ಸಾ ಅವರುಕೆಲವು ದಿನಗಳ ಹಿಂದಷ್ಟೇ ವಿವಾಹವಾಗಿದ್ದರು. ನಸುಕಿನ ಸಮಯದಲ್ಲಿ ಪತ್ನಿಯ ಜೊತೆ ಫೋನ್ಸಂಭಾಷಣೆಯಲ್ಲಿದ್ದ ಪಂಕಜ್ ಅವರು ಇದ್ದಕ್ಕಿದ್ದಂತೆ ಮೂರನೇ ಮಹಡಿಯ ಬಾಲ್ಕನಿಯಿಂದ ಕೆಳಗೆಬಿದ್ದಿದ್ದಾರೆ. ಇದರ ಪರಿಣಾಮ ತಲೆ ಹಾಗೂ ಎದೆಯ ಭಾಗಕ್ಕೆ ತೀವ್ರವಾಗಿ ಪೆಟ್ಟಾದ ಕಾರಣ ಸ್ಥಳದಲ್ಲೇಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಅಂಬುಲೆನ್ಸ್ ನಲ್ಲಿ ಅರೆವೈದ್ಯಕೀಯ ಸಿಬ್ಬಂದಿಗಳೊಂದಿಗೆ ರೈಡ್ ಲೋಕಲ್ ಏರಿಯಾ ಕಮಾಂಡ್ ಪೊಲೀಸರು ಸ್ಥಳಕ್ಕಾಗಿಮಿಸಿದ್ದಾರಾದರೂಅಷ್ಟರಲ್ಲಾಗಲೇ ತೀವ್ರರೀತಿಯ ರಕ್ತಸ್ರಾವವಾಗಿ ಪಂಕಜ್ ಸಾ ಸ್ಥಳದಲ್ಲೇ ಸಾವನ್ನಪ್ಪಿದ್ದರು ಎಂದುಪೊಲೀಸರು ತಿಳಿಸಿದ್ದಾರೆ.

ಪಂಕಜ್ ಸಾ ಅವರು ಬಿದ್ದ ಸ್ಥಳದಲ್ಲಿ ಕಾರ್ಡ್ ಲೆಸ್ ಫೋನ್ಹ್ಯಾಂಡ್ ಸೆಟ್ ನೆಲದಲ್ಲಿ ಪುಡಿಪುಡಿಯಾಗಿ ಬಿದ್ದಿದೆ. ಮಹಡಿ ಮೇಲೆ ನಿಂತು ಫೋನಿನಲ್ಲಿಮಾತನಾಡುತ್ತಿದ್ದಾಗ ಪಂಕಜ್ ಸಾ ಕಾಲುಜಾರಿ ಕೆಳಗೆ ಬಿದ್ದಿರಬಹುದು ಎಂಬುದು ಪ್ರಾಥಮಿಕ ತನಿಖೆಯಿಂದತಿಳಿದುಬಂದಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಪಂಕಜ್‌ ಸಾಅವರು ಇತ್ತೀಚೆಗಷ್ಟೇ ಭಾರತದಲ್ಲಿ ಮದುವೆಯಾಗಿ ಆಸ್ಟ್ರೇಲಿಯಾಕ್ಕೆ ಮರಳಿದ್ದರು ಎಂದು ಅವರ ಮ್ಯಾನೇಜರ್‌ ಕ್ಯಾರನ್‌ ವಾಲರ್‌ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!