ರಾಷ್ಯಾದಲ್ಲಿ ಹಡಗು ಮುಳುಗಿ 54 ಮಂದಿ ಸಾವು 
ದೇಶ

ರಷ್ಯಾ: ಹಡಗು ಮುಳುಗಿ 54 ಮಂದಿ ಜಲಸಮಾಧಿ

ರಷ್ಯಾದ ಒಕೊಹೊಟಸ್ಕ್‌ ಸಾಗರದಲ್ಲಿ ಪ್ರಯಾಣಿಕ ಹಡಗೊಂದು ಮುಳುಗಿ ಸುಮಾರು 54 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.

ಮಾಸ್ಕೊ: ರಷ್ಯಾದ ಒಕೊಹೊಟಸ್ಕ್‌ ಸಾಗರದಲ್ಲಿ ಪ್ರಯಾಣಿಕ ಹಡಗೊಂದು ಮುಳುಗಿ ಸುಮಾರು 54 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.

ಬುಧವಾರ ರಾತ್ರಿ ರಷ್ಯಾದ ಕಮಚಟ್ಕಾ ಪನಿನ್ಸುಲಾ ಕರಾವಳಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಆದರೆ ಘಟನಾ ಸ್ಥಳದಲ್ಲಿ ಸಮುದ್ರದ ನೀರು ಸಂಪೂರ್ಣವಾಗಿ ಹಿಮಗಟ್ಟಿರುವುದರಿಂದ  ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ದುರಂತಕ್ಕೀಡಾದ ಡಾಲ್ನಿ ವೊಸ್ಕೊಟ್‌ ನೌಕೆಯಲ್ಲಿ ಲಾಟ್ವಿಯಾ, ಉಕ್ರೇನ್‌, ಮ್ಯಾನ್ಮಾರ್‌ ದೇಶಗಳ ಒಟ್ಟು 132 ನೌಕಾ ಸಿಬ್ಬಂದಿ ಇದ್ದು, ಇದುವರೆಗೆ 63 ಮಂದಿಯನ್ನು ರಕ್ಷಿಸಲಾಗಿದೆ. ಇನ್ನುಳಿದವರಿಗಾಗಿ ಸಾಗರದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

ಸಮುದ್ರದಲ್ಲಿ ಮುಳುಗಿರುವ ನೌಕೆಯನ್ನು ಇದುವರೆಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಘಟನೆಗೆ ಕಾರಣವೇನು ಎನ್ನುವುದೂ ಪತ್ತೆಯಾಗಿಲ್ಲ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

ರಕ್ಷಿಸಲಾದ ಸಿಬ್ಬಂದಿಯನ್ನು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು 25ಕ್ಕೂ ಹೆಚ್ಚು ಮೀನುಗಾರಿಕಾ ಬೋಟುಗಳ ನೆರವು ಪಡೆಯಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP