ಪಟನಾ: ಹರಿದು ಹೋಗಿರುವ ಜನತಾ ಪರಿವಾರ ಮತ್ತೊಮ್ಮೆ ವಿಲೀನದ ಮಂತ್ರ ಪಠಿಸಲಿವೆ. ಈ ವರ್ಷದಲ್ಲೇ ಬಿಹಾರ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಪೂರ್ವಭಾವಿಯಾಗಿ ಅದನ್ನು ಘೋಷಿಸಲಾಗುತ್ತದೆ. ಹೀಗೆಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ತಿಳಿಸಿದ್ದಾರೆ.
ಇದೇ ವೇಳೆ ಪಕ್ಷಗಳ ವಿಲೀನಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ ಅವರು. ಅಂದ ಹಾಗೆ ವಿಲೀನದ ಬಳಿಕ ಹೊಸ ಪಕ್ಷಕ್ಕೆ ಸಮಾಜವಾದಿ ಜನತಾ ದಳ ಅಥವಾ ಸಮಾಜವಾದಿ ಜನತಾ ದಳ ಅಥವಾ ಸಮಾಜವಾದಿ ಜನತಾ ಪಕ್ಷ ಎಂಬ ಎರಡು ಹೆಸರುಗಳ ಬಗ್ಗೆ ಒಪ್ಪಿಗೆ ಸೂಚಿಸಲಾಗಿದೆ. ಶೀಘ್ರದಲ್ಲಿಯೇ ಒಂದು ಹೆಸರನ್ನು ಅಂತಿಮಪಡಿಸಲಾಗುತ್ತದೆ ಎಂದಿದ್ದಾರೆ ತ್ಯಾಗಿ.
ಎಸ್ ಪಿಯದ್ದೇ ಚಿಹ್ನೆ: ಹಾಲಿ ಸಮಾಜವಾದಿ ಪಕ್ಷ ಹೊಂದಿರುವ ಸೈಕಲ್ ಚಿಹ್ನೇಯೇ ಹೊಸ ಪಕ್ಷದ್ದಾಗಲಿದೆ. ಮುಂದಿನ ದಿನಗಳಲ್ಲಿ ಎಸ್ ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಐಎನ್ ಎಲ್ ಡಿ ಮತ್ತು ಜೆಡಿಎಸ್ ನಾಯಕ ದೇವೇಗೌಡರನ್ನು ಭೇಟಿಯಾಗಲಿದ್ದಾರೆ.
ಈ ಸಂದರ್ಭದಲ್ಲಿ ವಿಲೀನ ಪ್ರಕ್ರಿಯೆ ಬಗ್ಗೆ ಚರ್ಚಿಸಚಲಿದ್ದಾರೆ. ಹೊಸ ಪಕ್ಷದ ಮೊದಲ ಆದ್ಯತೆ ಬಿಹಾರ ವಿಧಾನ ಸಭೆ ಚುನಾವಣೆಯೇ ಆಗಲಿದೆ ಎಂದಿದ್ದಾರೆ ತ್ಯಾಗಿ.