ವಾಷಿಂಗ್ಟನ್: 2050ರ ವೇಳೆಗೆ ಇಡೀ ವಿಶ್ವದಲ್ಲೇ ಭಾರತ ಅತಿ ಹೆಚ್ಚು ಮುಸ್ಲಿಂಮರನ್ನು ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ ಎಂದು ಹೊಸ ಅಧ್ಯಯನ ವರದಿ ಮಾಡಿದೆ. ಅಲ್ಲದೇ, ಹಿಂದೂಗಳ ಜನಸಂಖ್ಯೆ ವಿಶ್ವದಲ್ಲಿ ಮೂರನೇ ಸ್ಥಾನ ಪಡೆಯುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಪ್ಯೂ ಸಂಶೋದನಾ ಕೇಂದ್ರ ವಿಶ್ವದಲ್ಲಿರುವ ಹಿಂದೂಗಳ ಜನಸಂಖ್ಯೆ ಹಾಗೂ ಇತರ ಧರ್ಮಗಳ ಜನಸಂಖ್ಯೆ ಬಗ್ಗೆ ಸಮೀಕ್ಷೆ ನಡೆಸಿ ವರದಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ, ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಭಾರತ ಮೂರನೇ ಸ್ಥಾನ ಪಡೆಯಲಿದ್ದು, ಮುಸ್ಲಿಂ ಜನಸಂಖ್ಯೆ ಹೆಚ್ಚು ಹೊಂದಿರುವ ಇಂಡೋನೇಷಿಯಾವನ್ನು ಭಾರತ ಹಿಂದಿಕ್ಕಲಿದ್ದು, ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ ಎಂದು ತಿಳಿದು ಬಂದಿದೆ.
ಕ್ರಿಶ್ಚಿಯನ್ ಮತ್ತು ಹಿಂದೂಗಳಿಗೆ ಹೋಲಿಸಿಕೊಂಡರೆ, ವಿಶ್ವದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸ್ತುತ ಕ್ರಿಶ್ಚಿಯನ್ ಜನಸಂಖ್ಯೆ ಸರಿಸಮಾನಾಗಿ ಮುಸ್ಲಿಂ ಜನಸಂಖ್ಯೆ ಇದೆ. ಇದೇ ರೀತಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಾ ಹೋದರೆ, 2070ರೊಳಗೆ ಇಸ್ಲಾಂ ವಿಶ್ವದ ಪ್ರಖ್ಯಾತ ಧರ್ಮವಾಗಲಿದೆ ಎಂದು ವರದಿ ಹೇಳಿದೆ.