ನವದೆಹಲಿ: ಕ್ರಿಶ್ಚಿಯನ್ನರ ಪಾಲಿನ ಪವಿತ್ರ ಹಬ್ಬವಾದ ಗುಡ್ ಫ್ರೈ ಡೆ ಹಾಗೂ ಈಸ್ಟರ್ ಸಂಭ್ರಮದ ಮಧ್ಯೆ ನ್ಯಾಯಾಧೀಶರಿಗಾಗಿ ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಶನಿವಾರ ಆಯೋ ಜಿಸಿದ್ದ ಔತಣಕೂಟದಿಂದ ಸುಪ್ರೀಂ ಕೋರ್ಟ್ ನ್ಯಾ. ಕುರಿಯನ್ ಜೋಸೆಫ್ ದೂರ ಉಳಿದಿದ್ದಾರೆ. ಈ ಸಂಬಂಧ ಪ್ರಧಾನಿ ಮೋದಿಗೆ ಅವರು ಪತ್ರವನ್ನೂ ಬರೆದಿದ್ದಾರೆ. ಗುಡ್ ಫ್ರೈ ಡೆ ಮತ್ತು ಈಸ್ಟರ್‍ನಂಥ ಪವಿತ್ರ ದಿನವನ್ನು ಕುಟುಂಬದೊಂದಿಗೆ ಕೇರಳದಲ್ಲಿ ಕಳೆಯಲಿ ಚ್ಛಿಸುತ್ತೇನೆ. ಹಾಗಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ಹೇಳಿರುವ ಅವರು, ಪ್ರಧಾನಿ ಆಹ್ವಾನಕ್ಕೆ ಧನ್ಯವಾದವನ್ನೂ ಸಲ್ಲಿಸಿ ದ್ದಾರೆ. ಜತೆಗೆ, ದೀಪಾವಳಿ, ಹೋಳಿ, ದಸರಾ,ಈದ್, ಬಕ್ರೀದ್, ಕ್ರಿಸ್‍ಮಸ್ ಅಥವಾ ಈಸ್ಟರ್ ಗಳು ಪವಿತ್ರ ಹಬ್ಬಗಳು. ಹಾಗಾ ಗಿ ಈ ಎಲ್ಲ ಧರ್ಮ ಗಳ ಧಾರ್ಮಿಕ ದಿನಗಳಿಗೆ ಸಮಾನ ಪ್ರಾಮುಖ್ಯತೆ ನೀಡಬೇಕು. ಇಂಥ ರಾಷ್ಟ್ರೀಯ ರಜಾ ದಿನಗಳಂದು ಯಾವುದೇ ಮಹ ತ್ವದ ಕಾರ್ಯಕ್ರಮಗಳನ್ನು ನಿಗದಿ ಮಾಡದಂತೆ ಪ್ರಧಾನಿ ಮೋದಿ ಅವರಿಗೆ ಮನವಿಯನ್ನೂ ಮಾಡಿ ಕೊಂಡಿದ್ದಾರೆ. ಗುಡ್ ಫ್ರೈ ಡೆ ಮತ್ತು ಈಸ್ಟರ್ ರಜೆಯ ಸಮಯದಲ್ಲಿ ಮೂರು ದಿನಗಳ ನ್ಯಾಯಾಧೀಶರ ಸಮಾವೇಶ ಆಯೋ ಜಿಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾ. ಎಚ್.ಎಲ್. ದತ್ತು ಕ್ರಮಕ್ಕೂ ನ್ಯಾ. ಕುರಿಯನ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ಸಿಜೆಐಗೂ ನ್ಯಾ.ಕುರಿಯನ್ ಪತ್ರ ಬರೆದಿದ್ದರು.
ಪ್ರತಿಕ್ರಿಯೆ ಗೆ ನಕಾರ: ಗುಡ್ ಫ್ರೈಡೆ, ಈಸ್ಟರ್ ವೇಳೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಮಾವೇಶ ಆಯೋಜಿಸಿದ್ದಕ್ಕೆ ಸಹೋದ್ಯೋಗಿ ನ್ಯಾ. ಕುರಿಯನ್ ಜೋಸೆಫ್ ವ್ಯಕ್ತಪಡಿಸಿರುವ ಆಕ್ಷೇಪಕ್ಕೆ ಪ್ರತಿಕ್ರಿಯೆ ನೀಡಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನಿರಾಕರಿಸಿದ್ದಾರೆ. ಜತೆಗೆ, ಮತ್ತೊಬ್ಬ ಸಹೋದ್ಯೋಗಿ ನ್ಯಾ.
ವಿಕ್ರಮಜಿತ್ ಸೇನ್ ಕೂಡ ಕುರಿಯನ್ ರೀತಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನುವ ವರದಿಗಳನ್ನು ನಿರಾಕರಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಸೇನ್
ಅವರು ತಮ್ಮ ಜತೆ ಮಾತನಾಡಿಯೇ ಇಲ್ಲ ಎಂದು ನ್ಯಾ. ದತ್ತು ಸ್ಪಷ್ಟಪಡಿಸಿದ್ದಾರೆ.