ಸೋನಿಯಾ ಗಾಂಧಿ 
ದೇಶ

ಸೋನಿಯಾ ಸಾಕು ರಾಹುಲ್‍ಗೆ ಶಾಕು!

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪಟ್ಟಾಭಿ ಷೇಕಕ್ಕೆ ಇನ್ನೇನು ಮುಹೂರ್ತ ನಿಗದಿಯಾಗಲಿದೆ ಎನ್ನುವಾಗಲೇ ಪಕ್ಷದೊಳಗೆ ಅಸಮಾಧಾನ...

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪಟ್ಟಾಭಿ ಷೇಕಕ್ಕೆ ಇನ್ನೇನು ಮುಹೂರ್ತ ನಿಗದಿಯಾಗಲಿದೆ ಎನ್ನುವಾಗಲೇ ಪಕ್ಷದೊಳಗೆ ಅಸಮಾಧಾನ ಹೊಗೆಯಾಡಲಾರಂಭಿಸಿದೆ. ರಾಹುಲ್ ನಮಗೆ ತಕ್ಕ ನಾಯಕನಲ್ಲ, ಅವರು ಪಕ್ಷದ ಅಧ್ಯಕ್ಷರಾಗಲು ಸೂಕ್ತ ರಲ್ಲ ಎಂಬುದನ್ನು ಸ್ವತಃ ಕಾಂಗ್ರೆಸ್‍ನ ನಾಯಕರೇ ಪರೋಕ್ಷವಾಗಿ ಹೇಳತೊಡಗಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಎಂದರೆ ಪಕ್ಷದ ವಕ್ತಾರ ಸಂದೀಪ್ ದೀಕ್ಷಿತ್ ಮತ್ತು ನಾಯಕಿ ಅಂಬಿಕಾ ಸೋನಿ.`ಕಾಂಗ್ರೆಸ್ ಮುನ್ನಡೆಸಬಲ್ಲ ಏಕೈಕ ಮತ್ತು ಅತ್ಯುತ್ತಮ ನಾಯಕಿ ಎಂದರೆ ಸೋನಿಯಾ ಗಾಂಧಿ .
ಅವರಿಗಿರುವ ಸಾಮರ್ಥ್ಯ ಪಕ್ಷದ ಯಾವೊಬ್ಬ ನಾಯಕನಿಗೂ ಇಲ್ಲ' ಎಂದು ಸಂದೀಪ್ ದೀಕ್ಷಿತ್ ಹೇಳಿದ್ದಾರೆ. ಈ ಮೂಲಕ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಸೂಕ್ತ ರಲ್ಲ ಎಂಬ ಅಭಿಪ್ರಾಯವನ್ನು ಸಾರ್ವಜನಿಕ ವಾಗಿಯೇ ವ್ಯಕ್ತಪಡಿಸಿದ್ದಾರೆ. ದೀಕ್ಷಿತ್ ಅವರ ಈ ಹೇಳಿಕೆ ಕಾಂಗ್ರೆಸ್‍ನಲ್ಲಿ ಯಾವ ರೀತಿ ಬಿರುಗಾಳಿ ಬೀಸಲಿದೆ ಎನ್ನುವುದನ್ನು ಕಾದು ನೋಡಬೇಕಷ್ಟೆ.

ಸೋನಿಯಾ ಮಾತ್ರ: ರಾಹುಲ್ ಸಮರ್ಥ ನಾಯಕ ಹೌದು. ಆದರೆ, ಪಕ್ಷಕ್ಕೆ ಇದು ಅತ್ಯಂತ ಸೂಕ್ತ ಸಮಯ. ಇಂತಹ ಸಂದರ್ಭ ದಲ್ಲಿ ಇಬ್ಬರ ನಡುವೆ ಯಾರು ಉತ್ತಮರು ಎಂದು ಕೇಳಿದರೆ ನಾವು ಆಯ್ಕೆ  ಮಾಡುವುದು ಸೋನಿಯಾ ಅವರನ್ನು. ಶೇ.97ರಿಂದ 99 ಕಾಂಗ್ರೆಸಿಗರು ಸೋನಿಯಾರನ್ನೇ ನಾಯಕಿ ಎಂದು ನಂಬಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ ದೀಕ್ಷಿತ್.
ಸೋನಿಯಾ ಸಾಮರ್ಥ್ಯ ಯಾವೊಬ್ಬನಿಗೂ ಇಲ್ಲ: ಪಕ್ಷದ ಅಧ್ಯಕ್ಷ ಸ್ಥಾನವನ್ನು ಸೋನಿಯಾ ಯಾರಿಗೆ ಬೇಕಾದರೂ ನೀಡಲಿ. ಆದರೆ, ತಮ್ಮ ನಾಯಕತ್ವವನ್ನು ಮಾತ್ರ ಯಾರಿಗೂ ವರ್ಗಾಯಿ ಸದಿರಲಿ ಎನ್ನುವುದು ನಮ್ಮ ಕೋರಿಕೆ ಎಂದೂ ಹೇಳಿದ್ದಾರೆ ಸಂದೀಪ್ ದೀಕ್ಷಿತ್.

ಪಕ್ಷವು ರಾಹುಲ್ ನೇತೃತ್ವದಲ್ಲಿ ಪುಟಿದೇಳಲಿದೆ ಎಂಬ ಭಾವನೆ ಪಕ್ಷದ ನಾಯಕರಲ್ಲೇ ಬತ್ತಿಹೋಗಿದೆ. ಹೀಗಾಗಿ ಅವರ ಪಟ್ಟಾಭಿಷೇಕಕ್ಕೂ ಮೊದಲೇ ಕಾಂಗ್ರೆಸ್‍ನಲ್ಲಿ ಬಿsನ್ನಮತ
ಸ್ಪೋಟಗೊಳ್ಳುವ ಸುಳಿವು ಸಿಕ್ಕಿದೆ. ಇದನ್ನು ಸೋನಿಯಾ ಹೇಗೆ ನಿಭಾಯಿಸುತ್ತಾರೆ ಎನ್ನುವುದೇ ಈಗಿರುವ ಪ್ರಶ್ನೆ.

2014ರ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡರೂ, ಸೋನಿಯಾ ಅವರು ನಮ್ಮನ್ನು ಮತ್ತೆ ಜನಜನಿತ ರಾಜಕೀಯದೆಡೆಗೆ ಮರಳಿಸುತ್ತಿದ್ದಾರೆ. ಅದೂ ಭಾರತೀಯರು ಇಷ್ಟಪಡುವ ಬೀದಿ ರಾಜಕೀಯದ ಮೂಲಕ ಎಂದಿದ್ದಾರೆ ದೀಕ್ಷಿತ್. ಇತ್ತೀಚೆಗೆ ಸೋನಿಯಾ ಅವರು ಪ್ರತಿಪಕ್ಷ ನಾಯಕರೆಲ್ಲರನ್ನೂ ಒಟ್ಟುಗೂಡಿಸಿ ರಾಷ್ಟ್ರಪತಿ ಭವನಕ್ಕೆ ಕಾಲ್ಡಡಿಗೆ ಹಮ್ಮಿಕೊಂಡಿದ್ದನ್ನು ಪ್ರಸ್ತಾಪಿಸಿದ ದೀಕ್ಷಿತ್, ಸೋನಿಯಾ ಗಾಂಧಿ ಅವರಿಗಿರುವಷ್ಟು ಸಾಂದರ್ಭಿಕ ಸೂಕ್ಷ್ಮತೆ, ಸಂಘಟನಾ ಸಾಮರ್ಥ್ಯ ಮತ್ತು ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಕಾಂಗ್ರೆಸ್ನ ಬೇರಾವ ನಾಯಕನಿಗೂ ಇಲ್ಲ ಎಂದಿದ್ದಾರೆ.

ಅವರ ಅಗತ್ಯತೆ ಈಗ ಹೆಚ್ಚಿದೆ: ಕಾಂಗ್ರೆಸ್‍ನಲ್ಲಿ ಚುನಾವಣೆ ನಡೆಯುವಾಗ, ಪಕ್ಷದ ಅಧ್ಯಕ್ಷರಾಗಿ ಮತ್ತು ನಾಯಕರಾಗಿ ನಮಗೆ ಬೇಕಾಗಿರುವುದು ಸೋನಿಯಾ ಅವರು ಮಾತ್ರ. ಪಕ್ಷಕ್ಕೆ ಅವರ ಅಗತ್ಯತೆ 1998ಕ್ಕಿಂತಲೂ ಹೆಚ್ಚು ಇರುವುದು ಈಗ .ಕಾಂಗ್ರೆಸ್ಸ್ ನ್ನು ರಾಜಕೀಯ ಶಕ್ತಿಯಾಗಿ  ನಿರ್ಮಿಸುವ ಸಾಮರ್ಥ್ಯವಿರುವ ಏಕೈಕ ನಾಯಕಿ ಅವರು. ಯಾವುದು ರಾಜಕೀಯ ವಿಷಯ, ಯಾವುದು ಪಕ್ಷದ ವಿಷಯ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬಲ್ಲರು. 2004ರ ಚುನಾವಣೆಯನ್ನು ಸ್ವಶಕ್ತಿದಿಂದ ಗೆದ್ದವರು ಸೋನಿಯಾ. ಅವರು ಪಕ್ಷ ಮತ್ತು ಸರ್ಕಾರದ ನಡುವೆ ಸಮತೋಲಿತ ಸಮೀಕರಣವನ್ನು ನಿರ್ವಹಿಸಿದ್ದಾರೆ. ನನ್ನ ವೈಯಕ್ತಿಕ
ಅಬಿsಪ್ರಾಯದ ಪ್ರಕಾರ, ಸೋನಿಯಾ ಅವರು ಎಷ್ಟು ಉದಾರತೆ ಹೊಂದಿರಬೇಕಿತ್ತೋ, ಅದಕ್ಕಿಂತ ಹೆಚ್ಚಿನ ಉದಾರ ಮನಸ್ಸನ್ನು ಹೊಂದಿದ್ದಾರೆ ಎಂದು ಅಬಿsಪ್ಪಾಯಪಟ್ಟಿದ್ದಾರೆ ದೀಕ್ಷಿತ್. ಇದೇ ವೇಳೆ, ಕಾಂಗ್ರೆಸ್‍ನ ಹಿರಿಯ ನಾಯಕಿ ಅಂಬಿಕಾ ಸೋನಿ ಅವರೂ ಸೋನಿಯಾರೇ ಅಧ್ಯಕ್ಷೆಯಾಗಬೇಕು ಎಂಬ ವಾದವನ್ನು ಮುಂದಿಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್