ದೇಶ

ಸ್ಮೃತಿ ಇರಾನಿ ಟ್ರಯಲ್ ರೂಮ್ ಪ್ರಕರಣ: ಫ್ಯಾಬ್ ಇಂಡಿಯಾ ಎಂ.ಡಿ, ಸಿಇಒ ವಿಚಾರಣೆ

Lingaraj Badiger

ಪಣಜಿ: ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಟ್ರಯಲ್ ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ ಪತ್ತೆ ಹಚ್ಚಿದ ಪ್ರಕರಣ ಸಂಬಂಧ ಕಡೆಗೂ ಫ್ಯಾಬ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಲಿಯಂ ಬಿಸ್ಸೆಲ್ ಮತ್ತು ಸಿಇಒ ಸುಬ್ರತ ದತ್ ಸೇರಿದಂತೆ ಎಂಟು ಹಿರಿಯ ಅಧಿಕಾರಿಗಳು ಶುಕ್ರವಾರ ಗೋವಾ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಟ್ರಯಲ್ ರೂಮ್‌ನಲ್ಲಿ ಕ್ಯಾಮೆರಾ ಅಳವಡಿಸಿದ ಕುರಿತು ನಾವು ಫ್ಯಾಬ್ ಇಂಡಿಯಾದ ಅಧಿಕಾರಿಗಳ ವಿಚಾರಣೆ ನಡೆಸುತ್ತಿದ್ದೇವೆ ಎಂದು ಗೋವಾ ಅಪರಾಧ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಬಿಸ್ಸೆಲ್ ಹಾಗೂ ದತ್ ಸೇರಿದಂತೆ ಫ್ಯಾಬ್ ಇಂಡಿಯಾದ ಎಂಟು ಅಧಿಕಾರಿಗಳಿಗೆ ಗೋವಾ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೆ ವಿಚಾರಣೆಗೆ ಹಾಜರಾಗಲು ಪದೇಪದೆ ಕಾಲವಕಾಶ ಕೇಳುತ್ತಿದ್ದ ಅಧಿಕಾರಿಗಳು ಇಂದು ಕಡೆಗೂ ವಿಚಾರಣೆಗೆ ಹಾಜರಾಗಿದ್ದಾರೆ.

ಕಳೆದ ವಾರ ಗೋವಾ ಪ್ರವಾಸದ ವೇಳೆ ಸ್ಮೃತಿ ಇರಾನಿ ಅವರು ಕಾಂದೋಳಿಂನಲ್ಲಿನ ಫ್ಯಾಬ್ ಇಂಡಿಯಾ ಮಳಿಗೆಯಲ್ಲಿ ಬಟ್ಟೆ ಖರೀದಿಸಿ ಡ್ರೆಸಿಂಗ್ ರೂಮ್ ಗೆ ತೆರಳಿದ್ದರು. ಈ ವೇಳೆ ಅಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿದನ್ನು ಪತ್ತೆ ಮಾಡಿದ್ದರು. ಈ ಸಂಬಂಧ ಗೋವಾ ಪೊಲೀಸರು ನಾಲ್ವರನ್ನು ಬಂಧಿಸಿ, ವಿಚಾರಣೆ ಸಹ ನಡೆಸಿದ್ದರು.

SCROLL FOR NEXT