ಸರಸ್ವತಿ ನದಿ 
ದೇಶ

ಸರಸ್ವತಿ ನದಿ ಪುನರನ್ವೇಷಣೆ

ಋಗ್ವೇದದಲ್ಲಿ ಉಲ್ಲೇಖವಾಗಿರುವ ಗುಪ್ತ ಗಾಮಿನಿ ನದಿ ಸರಸ್ವತಿಯ ಪುನರನ್ವೇಷಣೆ ಮೋದಿ ಸರ್ಕಾರದ ಅವಧಿಯಲ್ಲಿ ಆರಂಭವಾಗಿದೆ. ಭಾರತೀಯ...

ನವದೆಹಲಿ: ಋಗ್ವೇದದಲ್ಲಿ ಉಲ್ಲೇಖವಾಗಿರುವ ಗುಪ್ತ ಗಾಮಿನಿ ನದಿ ಸರಸ್ವತಿಯ  ಪುನರನ್ವೇಷಣೆ  ಮೋದಿ ಸರ್ಕಾರದ ಅವಧಿಯಲ್ಲಿ ಆರಂಭವಾಗಿದೆ. ಭಾರತೀಯ
ಪ್ರಾಚ್ಯ ವಸ್ತು ಸಂಶೋಧನಾ ಕೇಂದ್ರಕ್ಕೆ ಪ್ರಾಚೀನ ನದಿ ಅಸ್ತಿತ್ವದಲ್ಲಿ ಇತ್ತು ಎಂಬುದರ ಬಗ್ಗೆ ಉತ್ಖನನ ಆರಂಭಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಈ ವಿಚಾರ
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರತಿ ಬಾರಿಯೂ ವಾಕ್ಸಮರಕ್ಕೆ ಕಾರಣವಾಗುತ್ತಿತ್ತು. ಯುಪಿಎ-2ರ ಅವಧಿಯಲ್ಲಿ ರದ್ದಾಗಿದ್ದ ಯೋಜನೆಯನ್ನು ಮತ್ತೆ
ಕೈಗೆತ್ತಿಕೊಳ್ಳುವಂತೆ ಸಂಸ್ಕೃತಿ ಸಚಿವಾಲಯ ಆದೇಶಿಸಿದೆ. ಋಗ್ವೇದ ಮತ್ತು ಹಲವು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಸರಸ್ವತಿ ನದಿಯ ಅಸ್ತಿತ್ವ ಇತ್ತು ಎನ್ನುವುದನ್ನು ಸಾಬೀತುಪಡಿಸುವ ಅಂಶಗಳನ್ನು ಸಂಶೋಧನೆಯಿಂದ ಸಾಬೀತುಪಡಿಸುವಂತೆ ಭಾರತೀಯ ಪ್ರಾಚ್ಯ ವಸ್ತು ಸಂಶೋಧನಾ ಕೇಂದ್ರಕ್ಕೆ ಈಗಾಗಲೇ
ಸೂಚನೆ ನೀಡಿದೆ. ಅದರಂತೆ ಇಲಾಖೆ ರಾಜಸ್ಥಾನದಲ್ಲಿ ಅಗೆತ ಕಾರ್ಯ ಆರಂಭಿಸಿದೆ.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರದ 2002ರಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ನದಿಯ ಬಗ್ಗೆ ಸಂಶೋಧನೆ ನಡೆಸಲು
ತೀರ್ಮಾ ನಿಸಿತ್ತು. ಅದಕ್ಕಾಗಿ ಅಂದಿನ ಸಂಸ್ಕೃತಿ ಸಚಿವ ಜಗ್‍ಮೋಹನ್ ಮೋಹನ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಅದು ವರದಿ ಸಲ್ಲಿಸಿದ ಬಳಿಕ ಅಂದಿನ
ಸರ್ಕಾರ ಯೋ  ಜನೆ ಜಾರಿಗೆ ಆರಂಬಿsಸಿತ್ತು. ಅದರಂತೆ 2004ರ ವರೆಗೆ ಸರಸ್ವತಿ ಯೋಜನೆ ಬಿರುಸಿನಿಂದ ಸಾಗಿತ್ತು. ಇದೀಗ ಹಯರ್ಯಾಣದಲ್ಲಿ ಬಿಜೆಪಿ ಸರ್ಕಾರ
ಬಂದಿರುವುದರಿಂದ ಯೋಜನೆ ಜಾರಿಗೆ ಮತ್ತಷ್ಟು ಇಂಬು ನೀಡಿದಂತಾಗಿದೆ. ಅದಕ್ಕಾಗಿ ಆದಿ ಬದ್ರಿ ಹೆರಿಟೇಜ್ ಬೋರ್ಡ್ ಅನ್ನು ಆರಂಬಿsಸಿದೆ. ಇದರ
ಹೊರತಾಗಿಯೂ ಕೇಂದ್ರ ಪ್ರಮುಖ ಪಾತ್ರ ವಹಿಸಿದೆ. 2004ರ ಮಹಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸೋಲು ಅನುಭವಿಸಿತ್ತು. ಇದಾದ ಬಳಿಕ
ಯೋಜನೆ ಮೂಲೆ ಸೇರಿತ್ತು. ಭಾರತೀಯ ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆಯ ತಂಡ ರಾಜಸ್ಥಾನದ ಗಂಗಾ ನಗರ ಜಿಲ್ಲೆಯ ಬಿಂಜೋರ್ ನಲ್ಲಿ ಉತ್ಖನನ ಆರಂಬಿsಸಿದೆ. ಘಗ್ಗರ್-ಹಕ್ರಾ ನದಿ ಪಾತ್ರದ ಗುಂಟ ಗುಪ್ತಗಾಮಿನಿಯಾಗಿ ಸರಸ್ವತಿ ಹರಿಯುತ್ತಿತ್ತು ಎಂದು ನಂಬಲಾಗಿದೆ. ಹೀಗಾಗಿ, ಈ ಪ್ರದೇಶದಲ್ಲಿ ತಂಡ ಸಂಶೋಧನೆ ನಡೆಸಲಿದೆ. ಇದೇ
ಪ್ರದೇಶದಲ್ಲಿ 1970ರಲ್ಲಿ ಆಗಿನ ಕೇಂದ್ರ ಸರ್ಕಾರ ಉತ್ಖನನ ನಡೆಸಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಹರಪ್ಪ ನಾಗರಿಕತೆ ಮತ್ತು ಪವಿತ್ರ ನದಿಗೂ ಸಂಬಂಧ ಇದೆಯೇ
ಎಂಬ ಬಗ್ಗೆ ತಿಳಿದುಕೊಳ್ಳಲು ಮುಂದಾಗಿದೆ ಎಎಸ್‍ಐ. 2002ರಲ್ಲಿ ಆಗಿನ ಸರ್ಕಾರ ರಚಿಸಿದ್ದ ಸಮಿತಿಯನ್ನೇ ಉಳಿಸಿಕೊಳ್ಳ ಲಾಗುತ್ತದೆ. ಅಗತ್ಯ ಬಿದ್ದರೆ ಹೊಸ
ಸದಸ್ಯರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದಿದ್ದಾರೆ ಎಎಸ್‍ಐ ಉಪ ಮಹಾ ನಿರ್ದೇಶಕ ಬಿ.ಆರ್. ಮಣಿ.


ಯೋಜನೆ ರಾಜಕೀಯ


2002 ವಾಜಪೇಯಿ ಸರ್ಕಾರದಿಂದ ಸರಸ್ವತಿ ನದಿ ಸಂಶೋಧನೆ ಆರಂಭ. 2004ರ ವರೆಗೆ ಕಾರ್ಯ ಪ್ರಗತಿ
ಯುಪಿಎ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಜೈಪಾಲ್ ರೆಡ್ಡಿಯಿಂದ ಸರಸ್ವತಿ ನದಿ ಅಸ್ತಿತ್ವವೇ ಇಲ್ಲ ಎಂದು ಸಂಸತ್‍ಗೆ ಮಾಹಿತಿ
- ಸರ್ಕಾರದಿಂದ ಹಿಂದಿನ ಸಮಿತಿ ವಜಾ 2006 ಸದನ ಸಮಿತಿಯಿಂದ ಎಎಸ್‍ಐಗೆ ತರಾಟೆ.ಯೋ ಜನೆಯೇ  ರದ್ದು
- ಮೋದಿ ಸರ್ಕಾರದಿಂದ ಯೋ ಜನೆಗೆ ಮರು ಚಾಲನೆ
- ಋಗ್ವೇದದಲ್ಲಿ ಸರಸ್ವತಿ ನದಿಯ ಬಗ್ಗೆ ಇದುವರೆಗೆ  ಸರ್ಕಾರ ಉತ್ಖನನ ನಡೆಸಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಹರಪ್ಪ ನಾಗರಿಕತೆ ಮತ್ತು ಪವಿತ್ರ ನದಿಗೂ ಸಂಬಂಧ ಇದೆಯೇ
ಎಂಬ ಬಗ್ಗೆ ತಿಳಿದುಕೊಳ್ಳಲು ಮುಂದಾಗಿದೆ ಎಎಸ್‍ಐ.
2002ರಲ್ಲಿ ಆಗಿನ ಸರ್ಕಾರ ರಚಿಸಿದ್ದ ಸಮಿತಿಯನ್ನೇ ಉಳಿಸಿಕೊಳ್ಳ ಲಾಗುತ್ತದೆ. ಅಗತ್ಯ ಬಿದ್ದರೆ ಹೊಸ ಸದಸ್ಯರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದಿದ್ದಾರೆ
ಎಎಸ್‍ಐ ಉಪ ಮಹಾ ನಿರ್ದೇಶಕ ಬಿ.ಆರ್. ಮಣಿ. 2002 ವಾಜಪೇಯಿ ಸರ್ಕಾರದಿಂದ ಸರಸ್ವತಿ ನದಿ ಸಂಶೋಧನೆ ಆರಂಭ. 2004ರ ವರೆಗೆ
ಕಾರ್ಯ ಪ್ರಗತಿ -
- ಯುಪಿಎ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಜೈಪಾಲ್ ರೆಡ್ಡಿಯಿಂದ ಸರಸ್ವತಿ ನದಿ ಅಸ್ತಿತ್ವವೇ ಇಲ್ಲ ಎಂದು ಸಂಸತ್‍ಗೆ ಮಾಹಿತಿ
- ಸರ್ಕಾರದಿಂದ ಹಿಂದಿನ ಸಮಿತಿ ವಜಾ 2006 ಸದನ ಸಮಿತಿಯಿಂದ ಎಎಸ್‍ಐಗೆ ತರಾಟೆ. ಯೋಜನೆಯೇ  ರದ್ದು
- ಮೋದಿ ಸರ್ಕಾರ-ದಿಂದ ಯೋ ಜನೆಗೆ ಮರು ಚಾಲನೆ
- ಋಗ್ವೇದದಲ್ಲಿ ಸರಸ್ವತಿ ನದಿಯ ಬಗ್ಗೆ ಉಲ್ಲೇಖ
- ಹಿಮಾಲಯದಲ್ಲಿ ಉಗಮವಾಗಿರುವ ಬಗ್ಗೆ ಇತಿಹಾಸಕಾರರ ಅಬಿsಪ್ರಾಯ
-ಈಗಿನ ಅಲಹಾಬಾದ್‍ನಲ್ಲಿ ಗಂಗಾ, ಯಮು ನಾ ಜತೆಗೆ ಸರಸ್ವತಿ ಸಂಗಮಗೊಳ್ಳುತ್ತಿತ್ತು
-ಈಗಿನ ಘಗ್ಗರ್-ಹಕ್ರ ನದಿ  ಹಿಂದಿನ ಪವಿತ್ರ ನದಿ: ಕೆಲ ಇತಿಹಾಸಕಾರರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT