ದೇಶ

ವಿಶ್ವಯುದ್ಧ ಸ್ಮಾರಕಕ್ಕೆ ಪ್ರಧಾನಿ ಭೇಟಿ, ಭಾರತೀಯ ಸೈನಿಕರಿಗೆ ಮೋದಿ ನಮನ

Lingaraj Badiger

ಪ್ಯಾರಿಸ್: ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಲಿಲ್ಲೆಯಲ್ಲಿರುವ ವಿಶ್ವಯುದ್ಧ ಸ್ಮಾರಕಕ್ಕೆ ಭೇಟಿ ಮೊದಲ ವಿಶ್ವಸಮರದಲ್ಲಿ ಮಡಿದ ಸಾವಿರಾರು ಭಾರತೀಯ ಸೈನಿಕರಿಗೆ ಗೌರವ ವಂದನೆ ಸಲ್ಲಿಸಿದರು.

ಪ್ರವಾಸದ ಎರಡನೇ ದಿನವಾದ ಇಂದು ಮೋದಿ ವಿಶ್ವಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ತಮ್ಮ ವಿಚಾರಧಾರೆಗಳನ್ನು ನಮೂದಿಸಿದರು.

ಇದಕ್ಕೂ ಫ್ರಾನ್ಸ್‌ನ ಟೌಲೌಸ್‌ನಲ್ಲಿರುವ ಏರ್‌ಬಸ್ ನಿರ್ಮಾಣ ಕೇಂದ್ರಕ್ಕೆ ಭೇಟಿ ನೀಡಿದ್ದ ಮೋದಿ, ಅಲ್ಲಿನ ಏರ್‌ಬಸ್ ನಿರ್ಮಾಣ ಕಾರ್ಯವನ್ನು ವಿಕ್ಷೀಸಿ, ಇದೊಂದು ಅದ್ಭುತ ಅನುಭವ ಎಂದು ಟ್ವೀಟ್ ಮಾಡಿದ್ದರು.

SCROLL FOR NEXT