ಇತಿಹಾಸ ಪ್ರಸಿದ್ಧ ಸುಮಾರು 3 ಸಾವಿರ ವರ್ಷಗಳಿಗೂ ಹಳೆಯ ಸ್ಮಾರಕಗಳನ್ನು ನಾಶಪಡಿಸಿದ ಇಸಿಸ್ ಉಗ್ರರು 
ದೇಶ

ಇಸಿಸ್ ಉಗ್ರರಿಂದ ಇತಿಹಾಸ ಪ್ರಸಿದ್ಧ ನಿಮೃದ್ಧ್ ನಾಶ

ಮೊದಲಿನಿಂದಲೂ ಅನಾಚಾರಗಳನ್ನು ನಡೆಸಿ ರಕ್ತದೋಕುಳಿ ಆಡುತ್ತಿದ್ದ ಇಸಿಸ್ ಈಗ ಚರಿತ್ರೆ ನಾಶ ಮಾಡಿ ತಮ್ಮ ಪಾಪದ ಕೊಡ ತುಂಬಿಸ ಹೊರಟಿದೆ. ನಿಮೃದ್ಧ್ ಅನ್ನು ಸಂಪೂರ್ಣ ನಾಶ ಮಾಡುವ ಮೂಲಕ ತಮ್ಮ ಕ್ರೌರ್ಯವನ್ನು ಮೆರೆದಿದ್ದಾರೆ...

ಸಿರಿಯಾ: ಮೊದಲಿನಿಂದಲೂ ಅನಾಚಾರಗಳನ್ನು ನಡೆಸಿ ರಕ್ತದೋಕುಳಿ ಆಡುತ್ತಿದ್ದ ಇಸಿಸ್ ಈಗ ಚರಿತ್ರೆ ನಾಶ ಮಾಡಿ ತಮ್ಮ ಪಾಪದ ಕೊಡ ತುಂಬಿಸ ಹೊರಟಿದೆ. ನಿಮೃದ್ಧ್ ಅನ್ನು ಸಂಪೂರ್ಣ ನಾಶ ಮಾಡುವ ಮೂಲಕ ತಮ್ಮ ಕ್ರೌರ್ಯವನ್ನು ಮೆರೆದಿದ್ದಾರೆ.

ಇತಿಹಾಸ ಪ್ರಸಿದ್ಧ ಸ್ಥಳವನ್ನು ಯುದ್ಧ ಟ್ಯಾಂಕರ್ ಗಳನ್ನು ಬಳಸಿ ನೆಲಸಮ ಮಾಡಿದ್ದಾರೆ. ಅಲ್ಲದೇ ಅಲ್ಲಿದ್ದ ಪ್ರಾಚೀನ ಕಲಾಕೃತಿಗಳನ್ನು ಕೂಡ ತಮ್ಮೊಂದಿಗೆ ಹೊತ್ತೊಯ್ದಿದ್ದಾರೆ. ಯುನೆಸ್ಕೊ ಪಟ್ಟಿಯಲ್ಲಿರುವ ಈ ತಾಣವನ್ನು ನಾಶ ಮಾಡುವುದಾಗಿ ಇಸಿಸ್ ಕೆಲ ದಿನಗಳ ಹಿಂದೆ ಹೇಳಿಕೊಂಡಿತ್ತು. ಈ ಪ್ರಾಚೀನ ಸ್ಥಳದಲ್ಲಿ ಉತ್ಖನನ 1845ರಲ್ಲೇ ಆರಂಭವಾಗಿದ್ದು ಇಂದಿನವರೆಗೆ ಮುಂದುವರೆದಿದೆ.

2003ರಲ್ಲಿ ಇರಾಕಿನಲ್ಲಿ ನಡೆದ ಯುದ್ಧದ ಸಮಯದಲ್ಲಿ ಈ ಪ್ರದೇಶದಿಂದ ಹಲವಷ್ಟು ಪ್ರಾಚೀನ ವಸ್ತುಗಳು ನಾಶ ಹೊಂದಿದ್ದು ಕೆಲವು ವಸ್ತುಗಳನ್ನು ಕದ್ದೊಯ್ಯಲಾಗಿತ್ತು. ಬುಲ್ಡೋಜರ್ ಹಾಗೂ ವಿದ್ಯುತ್ ಉಪಕರಣಗಳನ್ನು ಬಳಸಿ ಪ್ರಾಚೀನ ತಾಣ ನಿಮೃದ್ಧ್ ಅನ್ನು ಇಸಿಸ್ ಉಗ್ರರು ನಾಶ ಮಾಡುವ ದೃಶ್ಯಗಳಿವೆ. ಅಲ್ಲದೇ ಈ ಕೃತ್ಯ ನಡೆಸುವ ಸಮಯದಲ್ಲಿ ಅವರು ಅಲ್ಲಾಹು ಅಕ್ಬರ್ ಎಂದು ಕಿರುಚಿದ್ದಾರೆ. ಸ್ಫೋಟಕಗಳನ್ನು ಬಳಸಿ ಹಳೆಯದಾದ ಸ್ಮಾರಕಗಳನ್ನು ನೆಲಸಮ ಮಾಡಿದ್ದಾರೆ. ಪುರಾತನ ಸ್ಥಳ ಧೂಳಿನಿಂದ ತುಂಬಿರುವ ದೃಶ್ಯಾವಳಿಗಳಿವೆ.

ನಿಮೃದ್ಧ್ ಎಲ್ಲಿದೆ?
ಯುದ್ಧಗ್ರಸ್ಥ ಇರಾಕ್‍ನ ಮುಖ್ಯ ನಗರವಾಗಿರುವ ಮಾಸೂಲ್‍ನಿಂದ ದಕ್ಷಿಣದಲ್ಲಿ 20 ಮೈಲಿ ದೂರದಲ್ಲಿ ನಿಮೃದ್ಧ್ ಎಂಬ ಸ್ಥಳವಿದೆ. ಇದು 610 ಕ್ರಿ.ಪೂ.ದಿಂದ 1250 ಕ್ರಿ.ಪೂ.ದಲ್ಲಿನ ಅಸಿರಿಯಾ ನಗರವಾಗಿತ್ತು.

ಈ ಸ್ಥಳದ ಮಹತ್ವವೇನು?
ಇತಿಹಾಸ ಪ್ರಸಿದ್ಧ ಈ ಸ್ಥಳದಲ್ಲಿ ಸುಮಾರು 3 ಸಾವಿರ ವರ್ಷಗಳಿಗೂ ಹಳೆಯ ಸ್ಮಾರಕಗಳಿವೆ.

ಇಸಿಸ್‍ಗೆ ಸೇರಿದ ಟ್ವಿಟರ್ ಅಕೌಂಟ್ ನಾಶ
ಇಸಿಸ್ ಸಂಘಟನೆಗಳಿಗೆ ಸೇರಿದ್ದು ಎನ್ನಲಾದ ಸುಮಾರು 10 ಸಾವಿರ ಟ್ವಿಟರ್ ಅಕೌಂಟ್‍ಗಳನ್ನು 24 ಗಂಟೆಯೊಳಗೆ ಟ್ವಿಟರ್ ತೆಗೆದುಹಾಕಿದೆ. ಉಗ್ರ ಚಟುವಟಿಕೆಗಳನ್ನು ಪ್ರೊತ್ಸಾಹಿಸುವ ವರದಿಗಳು ಹಾಕಿದ ಕಾರಣಕ್ಕಾಗಿ ಅಕೌಂಟ್ ನಾಶ ಮಾಡಲಾಗಿದೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT