ದೇಶ

ಭಾರತದಲ್ಲಿ ಚೀನಾ ಹ್ಯಾಕರ್ಸ್‍ಗಳಿಂದ ಬೇಹು

ಸಿಂಗಾಪುರ: ಚೀನಾ ಪ್ರಾಯೋಜಿತ ಗುಂಪೊಂದು ದಶಕದಿಂದ ಭಾರತದ ಸರ್ಕಾರಿ ಕಂಪ್ಯೂಟರ್ ನೆಟ್‍ವರ್ಕ್ಸ್‍ಗಳಲ್ಲಿ ಕಳ್ಳಗಿವಿ ಮಾಡುತ್ತಿದೆ.

ಆರ್ಥಿಕ, ರಕ್ಷಣೆ ಹಾಗೂ ರಾಜಕೀಯ ವಿಚಾರಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳಿಗಾಗಿ ಬೇಹುಗಾರಿಕೆ ನಡೆಸುತ್ತಿದೆ. ಹೌದು, ಸ್ಟ್ಯಾಂಡರ್ಡ್ ಇಂಟರ್ನೆಟ್ ಸಂಪರ್ಕಕ್ಕೆ ಸಿಗದ ಸರ್ಕಾರದ ರಹಸ್ಯ ನೆಟ್‍ವರ್ಕ್‍ಗಳು ಹಾಗೂ ಇತರೆ ನೆಟ್ ವರ್ಕ್‍ಗಳಲ್ಲಿ ಎಪಿಟಿ30 ಎನ್ನುವ ಗುಂಪೊಂದು ಬೇಹುಗಾರಿಕೆ ನಡೆಸಿದೆ ಎಂದು ಫೈರ್‍ಐ ಎನ್ನುವ ಸೈಬರ್ ಸೆಕ್ಯುರಿಟಿ ಸೇವಾ ಕಂಪನಿ ಹೇಳಿದೆ.

ಚೀನಾ ಮಾತ್ರ ಈ ವರದಿಯನ್ನು ನಿರಾಕರಿಸಿದೆ. ತಾನು ಎಲ್ಲ ರೀತಿಯ ಹ್ಯಾಕರ್ಸ್ ದಾಳಿಗಳನ್ನು ನಿಷೇಧಿಸುವ ವಿಚಾರಕ್ಕೆ ಬದ್ಧವಾಗಿರುವುದಾಗಿ ತಿಳಿಸಿದೆ.

SCROLL FOR NEXT