ಮುಂಬೈ: ಬಾಲಿವುಡ್ ನಟಿ ಮನೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಸ್ವಲ್ಪದರಲ್ಲೇ ನಟಿ ಮತ್ತು ಕುಟುಂಬಸ್ಥರು ಪಾರಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತೃಣಮೂಲ ಕಾಂಗ್ರೆಸ್ ಸಂಸದೆ ಮೂನ್ ಮೂನ್ ಸೆನ್ ಅವರ ಮನೆಯಲ್ಲಿ ಏರ್ ಕಂಡಿಷನ್ ನಿಂದ ಶಾರ್ಟ್ ಸರ್ಕಿಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಮನೆಯನ್ನು ಆವರಿಸುತ್ತಿದ್ದಂತೆ ಕುಟುಂಬಸ್ಥರು ಮನೆಯಿಂದ ಹೊರಡಗಡೆ ಬಂದು ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಈ ವೇಳೆ ಮೂನ್ ಸೇನ್, ಅವರ ಪತಿ, ಪುತ್ರಿ ನಟಿ ರಿಯಾ ಸೆನ್ ಮತ್ತು ಇಬ್ಬರು ಕೆಲಸಗಾರರು ಸಹ ಮನೆಯಲ್ಲಿದ್ದರು. ಅಂಧೇರಿಯಲ್ಲಿರುವ ರೂಯಾ ಪಾರ್ಕ್ ಅಪಾರ್ಟ್ಮೆಂಟಿನಲ್ಲಿರುವ 6ನೇ ಅಂತಸ್ತಿನಲ್ಲಿ ವಾಸವಾಗಿದ್ದರು.
ರಿಯಾ ಸೆನ್
ಬೆಂಕಿ ಆಹುತಿಯಿಂದಾಗಿ, ಮೂನ್ ಸೇನ್ ಅವರ ಮನೆ ಮತ್ತು ಪಕ್ಕದ ಮನೆಯ ಪೀಠೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು ನಾಶವಾಗಿವೆ. ಸುದ್ದಿ ತಿಳಿದ ಅಗ್ನಿ ಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದು, ಯಾವುದೇ ಪ್ರಾಣಪಾಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಮೂನ್ ಮೂನ್ ಸೇನ್ ಕನ್ನಡದ 'ಯುಗಪುರುಷ' ಚಿತ್ರದಲ್ಲಿ ರವಿಚಂದ್ರನ್ ಅವರೊಂದಿಗೆ ಈ ಹಿಂದೆ ನಟಿಸಿದ್ದು, ಅವರ ಪುತ್ರಿ ರಿಯಾ ಸೇನ್ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ.