ರಘುರಾಮ್ ರಾಜನ್ (ಸಂಗ್ರಹ ಚಿತ್ರ) 
ದೇಶ

ಆರ್ ಬಿಐ ಗವರ್ನರ್ ಗೆ "ಇಸಿಸ್" ಬೆದರಿಕೆ..!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ)ದ ಗವರ್ನರ್ ರಘುರಾಮ್ ರಾಜನ್ ಅವರಿಗೆ ಇಸಿಸ್ ಉಗ್ರಸಂಘಟನೆಯ ಹೆಸರಲ್ಲಿ ಬೆದರಿಕೆ...

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ)ದ ಗವರ್ನರ್ ರಘುರಾಮ್ ರಾಜನ್ ಅವರಿಗೆ ಇಸಿಸ್ ಉಗ್ರಸಂಘಟನೆಯ ಹೆಸರಲ್ಲಿ ಬೆದರಿಕೆ ಇ-ಮೇಲ್ ರವಾನೆ ಮಾಡಲಾಗಿದೆ.

ಕಳೆದ 2-3 ದಿನಗಳ ಹಿಂದೆಯೇ ಈ ಬೆದರಿಕೆ ಇ-ಮೇಲ್ ರವಾನೆಯಾಗಿದ್ದು, ಇಂದು ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಅವರಿಗೆ ಇ-ಮೇಲ್ ನಲ್ಲಿ ಬೆದರಿಕೆ ಹಾಕಲಾಗಿದ್ದು,  ಕೆಲ ಮಾಧ್ಯಮಗಳಲ್ಲಿ ಪ್ರಸಾರ ಮಾಡಿರುವಂತೆ isis583847@gmail.com ಎಂಬ ಇ-ಮೇಲ್ ನಿಂದ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಮೇಲ್ ನಲ್ಲಿ, "ನಿನ್ನನ್ನು ತೆಗೆಯಲು ಕೆಲವರು ಹಣ ನೀಡಿದ್ದಾರೆ. ಅವರು ನೀಡಿದ್ದಕ್ಕಿಂತ ಹೆಚ್ಚಿನ ಹಣವನ್ನು ನೀನು ನೀಡಿದರೆ ಮುಂದಿನ ವಿಚಾರದ ಕುರಿತು ನಾವು ಚರ್ಚಿಸೋಣ" ("I have been given money by somebody to eliminate you. If you will pay me more than I have been paid, then we can decide on it")ಎಂದು ಬರೆಯಲಾಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರ್ಕಾರ ಆರ್ ಬಿಐ ಕಚೇರಿ ಮತ್ತು ರಘುರಾಮ್ ರಾಜನ್ ಅವರ ನಿವಾಸಕ್ಕೆ ಒದಗಿಸಿರುವ ಪೊಲೀಸ್ ಭದ್ರತೆಯನ್ನು ಹೆಚ್ಚಳ ಮಾಡಿದೆ. ಇನ್ನು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮುಂಬೈ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಮಾರಿಯ ಅವರು, ಆರ್ ಬಿಐ ಗವರ್ನರ್ ಅವರಿಗೆ ಬೆದರಿಕೆ ಇ-ಮೇಲ್ ಬಂದ ಕುರಿತು ದೂರು ಬಂದಿದೆ. ಇಸಿಸ್ ಹೆಸರಿನಲ್ಲಿ ಇ-ಮೇಲ್ ರವಾನೆಯಾಗಿದ್ದು, ನಮ್ಮ ಉನ್ನತಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಇ-ಮೇಲ್ ಹಿಂದಿನ ದುಷ್ಕರ್ಮಿಗಳಗಳನ್ನು ಕಂಡುಹಿಡಿಯಲು ಅಮೆರಿಕದ ಮೂಲದ ಗೂಗಲ್ ಸಂಸ್ಥೆಯ ನೆರವು ಅತ್ಯಗತ್ಯ. ಹೀಗಾಗಿ ಗೂಗಲ್ ಸಂಸ್ಥೆಯಲ್ಲಿ ಈ ಬಗ್ಗೆ ವಿಚಾರಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿವಿಧ 10 ರಾಷ್ಟ್ರಗಳಿಂದ ಬಳಕೆ ಮಾಡಲ್ಪಟ್ಟ ಐಡಿ..!
ಇನ್ನು ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಅವರಿಗೆ ಬೆದರಿಕೆ ಬಂದಿದೆ ಎನ್ನಲಾಗುತ್ತಿರುವ ಜಿ-ಮೇಲ್ ಐಡಿಯನ್ನು ಕಳೆದ ಕೆಲ ದಿನಗಳಿಂದ ವಿಶ್ವದ ವಿವಿಧ 10 ರಾಷ್ಟ್ರಗಳಿಂದ ಬಳಕೆ ಮಾಡಲಾಗಿತ್ತು ಎಂಬ ವಿಚಾರ ತಿಳಿದುಬಂದಿದೆ. ಆಸ್ಟ್ರೇಲಿಯಾ, ಇಟಲಿ, ಅಮೆರಿಕ, ಕೆನಡಾ, ನೈಜಿರಿಯಾ, ಪೋಲ್ಯಾಂಡ್, ಬೆಲ್ಜಿಯಂ, ಜರ್ಮನಿ, ಹಾಂಗ್  ಕಾಂಗ್ ಮತ್ತು ಉಕ್ರೇನ್ ದೇಶದಲ್ಲಿ ಬಳಕೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಇನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಸೈಬರ್ ಪೊಲೀಸರು ಪ್ರಾಕ್ಸಿ ಇಂಟರ್ ನೆಟ್ ಪ್ರೋಟೋಕಾಲ್ ಮೂಲಕ ಈ ಐಡಿಯನ್ನು ಬಳಕೆ ಮಾಡಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT