ಬಜಾಜ್ ಚೇತಕ್ ಸ್ಕೂಟರ್ 
ದೇಶ

ಹಮಾರಾ ಬಜಾಜ್ ಮತ್ತೆ ರಸ್ತೆಗೆ?

ಹಮಾರಾ ಬಜಾಜ್ ಜಾಹೀರಾತು ಯಾರಿಂದಾದರೂ ಮರೆಯಲು ಸಾಧ್ಯವೇ?

ನವದೆಹಲಿ: ಹಮಾರಾ ಬಜಾಜ್ ಜಾಹೀರಾತು ಯಾರಿಂದಾದರೂ ಮರೆಯಲು ಸಾಧ್ಯವೇ?

80-90ರ ದಶಕದಲ್ಲಿ ಮನೆಗೊಂದರಂತೆ ಕಾಣಿಸಿಕೊಳ್ಳುತ್ತಿದ್ದ ಬಜಾಜ್ ಸ್ಕೂಟರುಗಳು ಆಟೋಮೊಬೈಲ್ ಜಗತ್ತಿನಲ್ಲಿ ನಡೆದ ಫೋರ್ ಸ್ಟ್ರೋಕ್ ಎಂಜಿನ್ ವಾಹನಗಳ ಅಬ್ಬರಕ್ಕೆ ತತ್ತರಿಸಿ ನೇಪಥ್ಯಕ್ಕೆ ಸರಿದು ಹೋಗಿದ್ದವು. ಆದರೆ ಆ ದಿನಗಳು ಮತ್ತೆ ಮರುಕಳಿಸುವ ಸೂಚನೆ ಕಂಡುಬರುತ್ತಿವೆ.

ವೆಸ್ಪಾ ಸ್ಕೂಟರ್ ಮಾರುಕಟ್ಟೆಗೆ ಬಂದು ಯಶಸ್ವಿಯಾದ ಬೆನ್ನಲ್ಲಿ ಈಗ ಬಜಾಬ್ ಚೇತಕ್ ಹೊಸರೂಪದಲ್ಲಿ ರಸ್ತೆಗಿಳಿಯುವ ಸಾಧ್ಯತೆ ಕಾಣಿಸುತ್ತಿದೆ. ಬಜಾಜ್ ಆಟೋಮೊಬೈಲ್ಸ್ ಕಂಪನಿ ತನ್ನ ಅತ್ಯಂತ ಜನಪ್ರಿಯ ಬ್ರಾಂಡ್ ಚೇತಕ್ ಹೆಸರನ್ನು ಮರು ನೋಂದಣಿ ಮಾಡಿಕೊಂಡಿರುವುದು ಆ ಗತವೈಭವವನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದೆ.

ಆದರೆ ಕಂಪನಿ ಚೇತಕ್ ಸ್ಕೂಟರ್‍ಗಳನ್ನು ಮತ್ತೆ ಉತ್ಪಾದಿಸುವ ಬಗ್ಗೆ ಖಚಿತ ಉತ್ತರ ನೀಡಿಲ್ಲ. ಸದ್ಯ ಚೇತಕ್ ಹೆಸರನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಮರು ನೋಂದಣಿ ಮಾಡಿರುವುದಾಗಿ ಹೇಳಿರುವ ಬಜಾಜ್, ಮುಂದಿನ ನಡೆ ಬಗ್ಗೆ ಕಾದು ನೋಡಿ ಎಂದಷ್ಟೇ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಂತ್ಯ ಸನ್ನಿಹಿತ?: ಇರಾನ್ ನತ್ತ ಮುಖ ಮಾಡಿದ ಅಮೆರಿಕದ ಅತ್ಯಂತ ವಿಧ್ವಂಸಕ ಕ್ಷಿಪಣಿ

IPL 2026: ರೋಹಿತ್ ಶರ್ಮಾ ದಾಖಲೆ ಧೂಳಿಪಟ ಮಾಡಿದ Virat Kohli; ಮತ್ತೆ ನಂಬರ್ 1 ಪಟ್ಟ!

IPL 2026: ಕೊನೆಗೂ ಗೆದ್ರಲ್ಲಪ್ಪಾ..; SRH ವಿರುದ್ಧ LSGಗೆ ಭರ್ಜರಿ ಜಯ, ಮೈದಾನದಲ್ಲೇ ನಾಯಕ Rishabh Pant ಬಿಗಿದಪ್ಪಿದ Sanjiv Goenka

IPL 2026: ಕೊನೆಗೂ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದ ಲಖನೌ, ಕಣ್ಣೀರು ಹಾಕಿದ ಸಂಜೀವ್ ಗೋಯೆಂಕಾ, Video!

Open The F*cking Strait, You Bast*rds: ಹತಾಶ ಅಮೆರಿಕ ಅಧ್ಯಕ್ಷರಿಂದ ಇರಾನ್ ಗೆ ಅಶ್ಲೀಲ ನಿಂದನೆ, ಬೈಗುಳ

SCROLL FOR NEXT