ಸಾಂದರ್ಭಿಕ ಚಿತ್ರ 
ದೇಶ

ದಲಿತ ವಿದ್ಯಾರ್ಥಿಗಳಿಂದ ಶೌಚಾಲಯ ತೊಳೆಸುತ್ತಿದ್ದ 8 ಶಿಕ್ಷಕರ ಬಂಧನ

ದಲಿತ ಮಕ್ಕಳಿಂದ ಮಲ ತೊಳೆಸುತ್ತಿದ್ದ 8 ಮಂದಿ ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ...

ತಿರುನಲ್ವೇಲಿ: ದಲಿತ ಮಕ್ಕಳಿಂದ ಮಲ ತೊಳೆಸುತ್ತಿದ್ದ 8 ಮಂದಿ ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ.
ತಿರುನಲ್ವೇಲಿ ಜಿಲ್ಲೆಯ ಹಳ್ಳಿಯೊಂದರಲ್ಲಿರುವ ಅನುದಾನಿತ ಪ್ರೌಢಶಾಲೆಯ ಶಿಕ್ಷಕರು ಪ್ರತಿ ತಿಂಗಳು ದಲಿತ ವಿದ್ಯಾರ್ಥಿಗಳಿಂದ ಮಲ ಸ್ವಚ್ಛ ಮಾಡಿಸುತ್ತಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ಈ ಪರಿಪಾಠ ಹೆಚ್ಚಾದ ಹಿನ್ನಲೆಯಲ್ಲಿ ಆಗಾಗ ದೂರುಗಳು ಬರುತ್ತಿದ್ದವು. ಆ ಊರಿನ ದಲಿತರು ಕೆಲವು ಬಾರಿ ಪ್ರತಿಭಟನೆ ನಡೆಸಿದ್ದರೂ, ದಲಿತ ವಿದ್ಯಾರ್ಥಿಗಳಿಂದ ಶೌಚಾಲಯ ತೊಳೆಸುವುದನ್ನು ಶಿಕ್ಷಕರು ನಿಲ್ಲಿಸರಿಲಿಲ್ಲ.
ಬಲವಂತವಾಗಿ ಶಿಕ್ಷಕರು ಈ ಕೆಲಸ ಮಾಡಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಈ ವಿಷಯ ಗಂಭೀರ ರೂಪ ಪಡೆದ ಹಿನ್ನಲೆಯಲ್ಲಿ ಎಚ್ಚೆತ್ತ ಪೊಲೀಸರು ಎಂಟು ಜನ ಶಿಕ್ಷಕರನ್ನು ಬಂಧಿಸಿದ್ದಾರೆ.
ಪೋಷಕರು ಹೇಳುವ ಪ್ರಕಾರ, 6 ರಿಂದ 8ನೇ ತರಗತಿಯಲ್ಲಿರುವ ಅವರ ಮಕ್ಕಳಿಂದ ಮಲ ಸ್ವಚ್ಛ ಮಾಡಿಸಲಾಗುತ್ತದೆ. ಕೆಲಸ ಮಾಡದಿದ್ದರೆ ಶಿಕ್ಷಕರು ಕಠಿಣ ಶಿಕ್ಷೆ ಕೊಡುತ್ತಾರೆ. ಇದರಿಂದಾಗಿ ಕೆಲ ಮಕ್ಕಳು ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದಾರಂತೆ.
ಪೊಲೀಸರು ಶಿಕ್ಷಕರನ್ನು ಬಂಧಿಸಿದ್ದಾರೆ. ನಮಗೆ ನ್ಯಾಯ ಸಿಗಬೇಕು ಎಂದು ದಲಿತ ಪೋಷಕರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

SCROLL FOR NEXT