ದೇಶ

ಲೈಂಗಿಕ ಅಲ್ಪಸಂಖ್ಯಾತರಿಗೆ ಸಮಾನ ಹಕ್ಕು: ರಾಜ್ಯಸಭೆಯಲ್ಲಿ ಬಿಲ್ ಪಾಸ್

Vishwanath S

ನವದೆಹಲಿ: ಲೈಂಗಿಕ ಅಲ್ಪಸಂಖ್ಯಾತರಿಗೆ ಸಮಾನ ಹಕ್ಕು ಖಾಸಗಿ ಮಸೂದೆಗೆ ಶುಕ್ರವಾರ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿದೆ.

2014ರ ಲೈಂಗಿಕ ಅಲ್ಪಸಂಖ್ಯಾತರ ಸಮಾನ ಹಕ್ಕು ಕಾಯ್ದೆಯನ್ನು ಡಿಎಂಕೆಯ ತಿರುಚಿ ಶಿವ ಅವರು ಮಂಡಿಸಿದರು. ಈ ವೇಳೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಲೈಂಗಿಕ ಅಲ್ಪಸಂಖ್ಯಾತರ ವಿಚಾರದಲ್ಲಿ ಸದನ ದ್ವಿಮುಖ ನೀತಿ ಅನುಸರಿಸುವುದು ಬೇಡ ಎಲ್ಲರು ಏಕಮತದಿಂದ ಈ ಕಾಯ್ದೆಗೆ ಬೆಂಬಲ ಸೂಚಿಸಬೇಕಿದೆ ಎಂದರು. ಬಳಿಕ  ರಾಜ್ಯಸಭೆಯಲ್ಲಿ ಧ್ವನಿ ಮತದ ಮೂಲಕ ಕಾಯ್ದೆಗೆ ಅಂಗೀಕಾರ ದೊರಕಿದೆ.

ಖಾಸಗಿ ಮಸೂದೆ ಮಂಡನೆ ವೇಳೆ ಸಂಪುಟ ಸಚಿವರು ಸೇರಿದಂತೆ 19 ಕೇಂದ್ರ ಸಚಿವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಎಲ್ಲರು ಸದನದಲ್ಲಿ ಹಾಜರಿದ್ದರು. ಇನ್ನುಳಿದಂತೆ ಮಸೂದೆಯನ್ನು ವಿರೋಧಿಸುವವರು ಸದನಕ್ಕೆ ಗೈರಾಗಿದ್ದರು.

SCROLL FOR NEXT