ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಹಿನ್ನೆಲೆಯಲ್ಲಿ ಇದೀಗ ಮೌಂಟ್ ಎವರೆಸ್ಟ್ ನಲ್ಲಿಯೂ ಹಿಮಪಾತವುಂಟಾಗಿದ್ದು, ಎವರೆಸ್ಟ್ ಏರಲು ಹೋಗಿದ್ದ ಬೆಂಗಳೂರಿನ ಎರಡು ತಂಡ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಹಿಮಪಾತ ಸಂಭವಿಸುವ ವೇಳೆಯಲ್ಲಿ 30 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಮತ್ತಷ್ಟು ಮಂದಿ ಸಾವನ್ನಪ್ಪಿರುವುದಾಗಿ ಶಂಕೆ ವ್ಯಕ್ತವಾಗಿದೆ.
ನೇಪಾಳದಲ್ಲಿ ಈಗಾಗಲೇ 7.9 ರಷ್ಟು ತೀವ್ರತೆಯಲ್ಲಿ ಪ್ರಬಲತೆಯಲ್ಲಿ ಭೂಮಿ ಕಂಪಿಸಿರುವ ಹಿನ್ನಲೆಯಲ್ಲಿ ಅಲ್ಲಿನ ಕಟ್ಟಡಗಳು ಹಾಗೂ ಮನೆಗಳು ನೆಲಕ್ಕುರುಳಿವೆ. ಸಾವಿರಾರು ಮಂದಿ ಕಟ್ಟಡಗಳ ಅವಶೇಷಗಳಲ್ಲಿ ಸಿಲುಕಿ 700 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.