ವಿವಾದಕ್ಕೆ ಸಿಲುಕಿದ 'ತೋಡೋ ನಹೀ ಜೋಡೋ' ಫೆವಿಕ್ವಿಕ್ ಜಾಹೀರಾತು
2015ರ ವಿಶ್ವಕಪ್ ಪಂದ್ಯಾವಳಿ ವೇಳೆಯಿಂದ ಪ್ರಸಾರವಾಗುತ್ತಿರುವ ಫೆವಿಕ್ವಿಕ್ ನ ಹೊಸ ಜಾಹಿರಾತು 'ತೋಡೋ ನಹೀ ಜೋಡೋ' ಇದೀಗ ಹೊಸ ವಿವಾದವೊಂದರಲ್ಲಿ ಸಿಲುಕಿದೆ...
ನವದೆಹಲಿ: 2015ರ ವಿಶ್ವಕಪ್ ಪಂದ್ಯಾವಳಿ ವೇಳೆಯಿಂದ ಪ್ರಸಾರವಾಗುತ್ತಿರುವ ಫೆವಿಕ್ವಿಕ್ ನ ಹೊಸ ಜಾಹಿರಾತು 'ತೋಡೋ ನಹೀ ಜೋಡೋ' ಇದೀಗ ಹೊಸ ವಿವಾದವೊಂದರಲ್ಲಿ ಸಿಲುಕಿದೆ.
ವಾಘಾ ಗಡಿ ಬಳಿ ಭಾರತ-ಪಾಕಿಸ್ತಾನ ದೇಶದ ಸೈನಿಕರು ಪರೇಡ್ ನಡೆಸುವ ವೇಳೆ ಪಾಕ್ ಸೈನಿಕನ ಬೂಟಿನ ತಳ ಕಿತ್ತುಹೋಗುತ್ತದೆ. ಇದನ್ನು ಕಂಡ ಭಾರತೀಯ ಸೈನಿಕ ಫೆವಿಕ್ವಿಕ್ ಹಚ್ಚಿ ಸರಿಪಡಿಸುವ ಮೂಲಕ ಪಾಕ್ ಸೈನಿಕನಿಗೆ ಆಗುವಂತಹ ಮುಜುಗರವನ್ನು ದೂರಮಾಡುತ್ತಾನೆ.
ಈ ಜಾಹೀರಾತು ಇದೀಗ ವಿವಾದಕ್ಕೆ ಸಿಲುಕಿದ್ದು, ಉಜ್ಜಯಿನಿ ಸಂಸದ ಚಿಂತಾಮಣಿ ಮಾಳವೀಯ, ಈ ಜಾಹೀರಾತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಜಾಹೀರಾತಿನಲ್ಲಿ ಭಾರತೀಯ ಸೈನಿಕರಿಗೆ ಅಪಮಾನವಾಗಿದೆ. ಇದೊಂದು ದೇಶ ವಿರೋಧಿ ಜಾಹೀರಾತಾಗಿದ್ದು, ಜಾಹೀರಾತಿನ ನಿರ್ದೇಶಕರು ಹಾಗೂ ನಿರ್ದೇಶಕರನ್ನು ದೇಶದ್ರೋಹಿ ಕಾನೂನಿನಡಿಯಲ್ಲಿ ಶಿಕ್ಷೆಗೆ ಗುರುಯಾಗಿಸಬೇಕೆಂದು ಆಗ್ರಹಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.