ಬೆಂಗಳೂರು: ನೇಪಾಳಕ್ಕೆ ಹೋದ 85 ಮಂದಿ ಬೆಂಗಳೂರಿಗರು ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.
ಖಾಸಗಿ ಸಂಸ್ಥೆಗೆ ಸೇರಿದ ಟ್ರಾವೆಲ್ಸ್ ನಲ್ಲಿ 85 ಮಂದಿ ಬೆಂಗಳೂರಿಗರು ನೇಪಾಳ ಪ್ರವಾಸಕ್ಕೆ ಹೋಗಿದ್ದರು. ಆದರೆ ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಇವರಾರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಪ್ರವಾಸಕ್ಕೆ ಹೋದವರ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದರು.
ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಂಡ ಹಿನ್ನೆಲೆಯಲ್ಲಿ, ಸುದ್ದಿ ತಿಳಿದ ನೇಪಾಳಕ್ಕೆ ಹೋದ ಬೆಂಗಳೂರಿಗರು ಸಹಾಯವಾಣಿ ಸಂಖ್ಯೆಗೆ ಕರೆಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ತಾವೆಲ್ಲರೂ ಸುರಕ್ಷಿತರಾಗಿದ್ದು, ಭಾನುವಾರ ಹಿಂತಿರುಗಿ ಬರುವುದಾಗಿ ಹೇಳಿದ್ದಾರೆನ್ನಲಾಗುತ್ತಿದೆ.