ನವದೆಹಲಿ: `ಗಡಿಯಲ್ಲಿ ಉಗ್ರರ ನುಸುಳುವಿಕೆ ತಡೆಯಲು ಸೈನಿಕರ ಕೊರತೆ ಇದೆ. ಇನ್ನು ದನಗಳ ಕಳ್ಳ ಸಾಗಣೆ ತಡೆಯಲು ನಿಮಗೆ ಸಾಧ್ಯವಿದೆಯೇ' ಹೀಗೆಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದು ಕೊಂಡದ್ದು ಸುಪ್ರೀಂಕೋರ್ಟ್.
ಬಾಂಗ್ಲಾದೇಶಕ್ಕೆ ದನಗಳ ಕಳ್ಳ ಸಾಗಣೆ ತಡೆಯಲು ಕೇಂದ್ರಕ್ಕೆ ಸೂಚನೆ ನೀಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಆರಂಭದಲ್ಲಿ ಈ ಬಗ್ಗೆ ಯಾವುದೇ ಆದೇಶ ನೀಡಲು ನಿರಾಕರಿಸಿದರೂ, ಕಳೆದ ವರ್ಷ ನೇಪಾಳಕ್ಕೆ ಜಾನುವಾರು ಸಾಗಣೆ ವಿರೋಧಿಸಿ ಸಲ್ಲಿಸಲಾಗಿದ್ದ ಅರ್ಜಿಯ ಜತೆ ಹಾಲಿ ಪ್ರಕರಣವನ್ನೂ ಸೇರಿಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿತು.