ನೇಪಾಳದ ಕಠ್ಮಂಡುವಿನಲ್ಲಿ ಸಂಭವಿಸಿದ ಭೂಕಂಪಕ್ಕೆ ನೆಲಸಮವಾದ ಕಟ್ಟಡಗಳು 
ದೇಶ

ಮಣಿಪಾಲ, ಮಂಗಳೂರಲ್ಲೂ ಕಂಪನದ ಅನುಭವ!

ನೇಪಾಳದಲ್ಲಿ ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಂಡಿರುವ ಭೂಕಂಪದ ಅನುಭವ ಇತ್ತ ಮಣಿಪಾಲ ಹಾಗೂ ಮಂಗಳೂರಿನಲ್ಲೂ ಅನುಭವಕ್ಕೆ ಬಂದಿದೆ...

ಉಡುಪಿ/ಮಂಗಳೂರು: ನೇಪಾಳದಲ್ಲಿ ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಂಡಿರುವ ಭೂಕಂಪದ ಅನುಭವ ಇತ್ತ ಮಣಿಪಾಲ ಹಾಗೂ ಮಂಗಳೂರಿನಲ್ಲೂ ಅನುಭವಕ್ಕೆ ಬಂದಿದೆ.

ಮಣಿಪಾಲದಲ್ಲಿ ಮಧ್ಯಾಹ್ನ ಸುಮಾರು 12 ಗಂಟೆ ಹೊತ್ತಿಗೆ ಮಣಿಪಾಲದ ಬಹುಮಹಡಿ ಕಟ್ಟಡಗಳು ಲಘವಾಗಿ ಕಂಪಿಸಿದ ಅನುಭವ ಕೆಲವು ಮಂದಿಗೆ ಆಗಿದೆ. ತಕ್ಷಣ ಬೊಬ್ಬೆ ಹೊಡೆದು ಉಳಿದವರಿಗೂ ತಿಳಿಸಿ ಕಟ್ಟಡದಿಂದ ಹೊರಗೆ ಬಂದಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಗುರುಪ್ರಸಾದ್ ತಿಳಿಸಿದ್ದಾರೆ.

ಈ ಹಿಂದೆ 2012ರಲ್ಲಿ ಮತ್ತು ಅದಕ್ಕಿಂತಲೂ ಹಿಂದೆ ಅನೇಕ ಬಾರಿ ಮಣಿಪಾಲದಲ್ಲಿ ಲಘ ಭೂಕಂಪನದ ಅನುಭ ಅನುಭವಗಳಾಗಿದೆ. ಆದರೆ, ಯಾವುದೇ ಹಾನಿಗಳು ಸಂಭವಿಸಿಲ್ಲ.
ಇನ್ನು ಮಂಗಳೂರು ನಗರದ ಹಲವೆಡೆ ಬಹುಮಹಡಿ ಕಟ್ಟಡಗಳಲ್ಲಿ ಲಘು ಕಂಪನದ ಅನುಭವ ಆದ ಹಿನ್ನೆಲೆಯಲ್ಲಿ ಜನರು ಕುತೂಹಲದಿಂದ ಹೊರ ಬಂದಿದ್ದಾರೆ.

ಬಾವುಟಗುಡ್ಡೆಯ ಮ್ಯಾಕ್ಸಿಮಸ್ ಕಟ್ಟಡದಲ್ಲಿ ಬೆಳಗ್ಗೆ 11.50ರ ವೇಳೆಗೆ ಕೆಲವು ಸೆಕೆಂಡ್‍ಗಳ ಕಾಲ ಲಘು ಕಂಪನದ ಅನುಭವ ಆಗಿದೆ. ಏನೆಂದು ತಿಳಿದು ಹೊರ ಬರುವಷ್ಟರಲ್ಲಿ ಕಂಪನ ನಿಂತಿದೆ. ಆದರೆ `ಇದೇ ರೀತಿ ಕಂಪನ ಅನುಭವ ಹಲವರಿಗೆ ಆಗಿದೆ' ಎಂದು ಅದೇ ಕಟ್ಟಡದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ರೇಡಿಯೋ ಮಿರ್ಚಿ ಆಜೆ ಕಿರಣ್ ಹೇಳಿದ್ದಾರೆ.

ಇದೇ ವೇಳೆ ಜೈಲ್ ರಸ್ತೆಯಾ ಸುಬ್ರಹ್ಮಣ್ಯ ಸದನ ಬಳಿ ಹಾಸ್ಟೆಲ್‍ನಲ್ಲೂ ಲಘು ಕಂಪನ ಅನುಭವ ಆಗಿದೆ ಎಂದು ಸುಭಾಸ್ ತಿಳಿಸಿದ್ದಾರೆ. ಹಂಪನಕಟ್ಟೆ ಪರಿಸರ, ಲೈಟ್ ಹಿಲ್ ರಸ್ತೆ ಕಟ್ಟಡಗಳಲ್ಲಿದ್ದವರಿಗೂ ಲಘು ಕಂಪನ ಅನುಭವಕ್ಕೆ ಬಂದಿದೆ. ಆದರೆ ಯಾವುದೇ ಭೌತಿಕ ಹಾನಿ ಕಂಡು ಬಂದಿಲ್ಲ. ನೇಪಾಳ, ಉತ್ತರ ಭಾರತದಲ್ಲಿ ನಡೆದ ಭೂಕಂಪನ ಪರಿಣಾಮ ಇರಬಹುದು, ನಾನಿದ್ದ ಕಡೆ ಕಂಪನ ಅನುಭವ ಆಗಿಲ್ಲ, ಆದರೆ ಈ ಕುರಿತು ಅನೇಕ ಮಂದಿ ಕರೆ ಮಾಡಿ ವಿಚಾರಿಸಿದರು' ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ರಾಮಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT