ದೇಶ

ಭೂಕಂಪ ಎಫೆಕ್ಟ್: ನೇಪಾಳದತ್ತ ಸರಿದ ಭಾರತದ 10 ಅಡಿ ಭೂಪ್ರದೇಶ

Vishwanath S

ವಾಷಿಂಗ್ಟನ್: ಕಳೆದ ಶನಿವಾರ ನೇಪಾಳದಲ್ಲಿ ಸಂಭವಿಸಿದ ಭೂಕಂಪದ ತೀರ್ವತೆಗೆ 10 ಅಡಿಯಷ್ಟು ಭಾರತದ ಭೂ ಪ್ರದೇಶ ನೇಪಾಳಕ್ಕೆ ಜರುಗಿ ಹೋಗಿದೆ ಎಂದು ಅಮೆರಿಕ ವಿಜ್ಞಾನಿಗಳು ಹೇಳಿದ್ದಾರೆ.

ನೇಪಾಳದಲ್ಲಿ ಸಂಭವಿಸಿದ್ದ ಭೂಕಂಪದ ತೀರ್ವತೆ  7.9ರಷ್ಟು ದಾಖಲಾಗಿತ್ತು. ಈ ವೇಳೆ ಒಂದು ಸಾವಿರದಿಂದ ದಿಂದ ಎರಡು ಸಾವಿರ ಚದುರ ಮೈಲಿಯಷ್ಟು ಭಾರತದ ಭೂ ಪ್ರದೇಶ ಜರುಗಿದೆ ಎಂದು ಕೊಲಂಬಿಯಾ ವಿಶ್ವವಿದ್ಯಾಲಯದ ಲ್ಯಾಮಂಟ್ ಅಸೋಸಿಯೇಟ್ ರಿಸರ್ಚ್ ಪ್ರೊಫೆಸರ್ ಕಾಲಿನ್ ಸ್ಟಾರ್ಕ್ ಹೇಳಿದ್ದಾರೆ.

ಅಲ್ಲದೆ ಭೂಕಂಪವಾದಾಗ ಕಾಠ್ಮಂಡು ಮತ್ತು ಪೋಖ್ರಾ ನಗರಗಳನ್ನು ಒಳಗೊಂಡ ವಲಯ ಒಂದು ದಿಕ್ಕಿನಲ್ಲಿ ಚಲಿಸುತ್ತಿದ್ದರೆ, ಇಡೀ ಹಿಮಾಲಯ ಇದರ ವಿರುದ್ಧ ದಿಕ್ಕಿನಲ್ಲಿತ್ತು. ಹೀಗಾಗಿ ಭಾರತದ ಇಡೀ ಉಪಖಂಡವು ನೇಪಾಳ ಮತ್ತು ಟಿಬೆಟ್‌ನತ್ತ ಜರುಗುತ್ತಿರುವುದು ಸ್ಪಷ್ಟವಾಗಿದೆ. ಇದರ ವೇಗವನ್ನು ನೋಡುವುದಾದರೆ, ವರ್ಷಕ್ಕೆ 1.8 ಇಂಚಿನಷ್ಟು ಭೂವಲಯ ಜರುಗುತ್ತಿದೆ ಎಂದು ಸ್ಟಾರ್ಕ್ ಹೇಳಿದ್ದಾರೆ.

ಭೌಗೋಳಿಕ ಬೆಳವಣಿಗೆಗಳ ಮೇಲೆ ನಿಗಾ ಇಟ್ಟಿರುವ ಭೂ ವಿಜ್ಞಾನಿಗಳು, ಭೂಮಿಯ ಪದರಗಳು ಹೇಗೆ ಚಲಿಸುತ್ತವೆ ಎಂಬುದರ ಕುರಿತು ಸುದೀರ್ಘ ಸಂಶೋಧನೆ ನಡೆಸುತ್ತಿದ್ದಾರೆ.

SCROLL FOR NEXT