ತಿರುವನಂತಪುರಂ : ಭಯೋತ್ಪಾದಕರು ಸೇರಿದಂತೆ ಯಾವ ಅಪರಾಧಿಗೂ ಗಲ್ಲು ಶಿಕ್ಷೆ ನೀಡಬಾರದು ಎಂದು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.
ಗಲ್ಲು ಶಿಕ್ಷೆ ಜಾರಿಯನ್ನು ವಿರೋಧಿಸಿರುವ ತರೂರ್ ಭಯೋತ್ಪಾದಕರಿಗೂ ಮರಣದಂಡಣೆ ವಿಧಿಸಬಾರದು ಎಂದು ಹೇಳಿದ್ದಾರೆ.
ಭಯೋತ್ಪಾದಕರಿಗೆ ಜೀವಿತಾವಧಿವರೆಗೂ ಪೆರೋಲ್ ನೀಡದೆ ಜೈಲು ಶಿಕ್ಷೆ ವಿಧಿಸಲಿ. ಆದರೆ, ಗಲ್ಲು ಶಿಕ್ಷೆ ನೀಡಬಾರದು ಎಂದ ತರೂರ್ ಕೊಲೆ ಮಾಡಿದ ವ್ಯಕ್ತಿಯನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಿದರೆ ಕೊಲೆಗಾರ ಮತ್ತು ಸರ್ಕಾರದ ನಡುವೆ ಯಾವ ವ್ಯತ್ಯಾಸವಿದೆ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ಕೂಡ ಕೊಲೆಗಾರರಂತೆ ವರ್ತಿಸಬಾರದು ಎಂದು ಹೇಳಿದ ಅವರು ಗಲ್ಲು ಶಿಕ್ಷೆ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಪ್ರತಿಪಾದಿಸಿದ್ದಾರೆ.