ದೇಶ

ಅಶ್ಲೀಲ ವೆಬ್ ಸೈಟ್ ಗೆ ನಿರ್ಬಂಧ: ತಾಲಿಬಾನ್ ಮಾದರಿಯ ಕ್ರಮ ಎಂದು ಆರ್.ಜಿ.ವಿ ಟ್ವೀಟ್

Srinivas Rao BV

ಮುಂಬೈ: ಅಶ್ಲೀಲ ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮ, ಪೋರ್ನ್ ವೆಬ್ ಸೈಟ್ ಗಳನ್ನು ವೀಕ್ಷಿಸುವುದರಿಂದ ವಯಸ್ಕರನ್ನು ವಂಚಿತಗೊಳಿಸುತ್ತಿರುವುದು ತಾಲಿಬಾನ್ ಹಾಗೂ ಐಎಸ್ಐಎಸ್ ಮಾದರಿಯ ನಡೆ ಎಂದು ಟೀಕಿಸಿದ್ದಾರೆ.

ಸ್ವಾತಂತ್ರ್ಯದ ವಿಷಯದಲ್ಲಿ ತಾಲಿಬಾನ್ ಹಾಗೂ ಐಎಸ್ಐಎಸ್ ಏನು ಮಾಡುತ್ತಿದೆಯೋ ಪೋರ್ನ್ ವೆಬ್ ಸೈಟ್ ಗಳನ್ನು ನಿಷೇಧ ಮಾಡಿರುವವರು ಅದನ್ನೇ ಮಾಡುತ್ತಿದ್ದಾರೆ. ಇಬ್ಬರ ನಡುವೆ ವ್ಯತ್ಯಾಸವಿಲ್ಲ ಎಂದು ರಾಮ್ ಗೋಪಾಲ್ ವರ್ಮ ಅಭಿಪ್ರಾಯಪಟ್ಟಿದ್ದಾರೆ. ಸುಮಾರು 857 ಪೋರ್ನ್ ವೆಬ್ ಸೈಟ್ ಗಳನ್ನು ನಿಷೇಧಿಸಲಾಗಿದ್ದು, ಈ ವೆಬ್ ಸೈಟ್ ಗಳಿಗಾಗಿ ಕ್ಲಿಕ್ ಮಾಡಿದರೆ ಖಾಲಿ ಪುಟ ತೆರೆದುಕೊಳ್ಳುತ್ತಿದೆ.

ಪೋರ್ನ್ ವೆಬ್ ಸೈಟ್ ಗಳನ್ನು ನಿಷೆಧಿಸುತ್ತಿರುವ ಸರ್ಕಾರದ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ರಾಮ್ ಗೋಪಾಲ್ ವರ್ಮ, ಮುಂದಿನ ಚುನಾವಣೆಯಲ್ಲಿ ಈ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಕರೆ ನೀಡಿದ್ದಾರೆ. ಯಾರಿಗೂ ತೊಂದರೆ ನೀಡದೇ ಪೋರ್ನ್ ವೀಕ್ಷಿಸುವ ವಯಸ್ಕರನ್ನು ವಂಚಿತರನ್ನಾಗಿಸುತ್ತಿರುವುದು ತಾಲಿಬಾನ್ ಹಾಗೂ ಐಎಸ್ಐಎಸ್ ಸ್ವಾತಂತ್ರ್ಯಕ್ಕೆ ಮಾಡುತ್ತಿರುವುದಕ್ಕೆ ಸಮನಾಗಿದೆ ಎಂದು ಆರ್.ಜಿ.ವಿ ಅಭಿಪ್ರಾಯಪಟ್ಟಿದ್ದಾರೆ.

ಅಪ್ರಾಪ್ತರು ಪೋರ್ನ್ ವೀಕ್ಷಿಸುತ್ತಿದ್ದಾರೆ ಆದ್ದರಿಂದ ಅಶ್ಲೀಲ ಜಾಲತಾಣಗಳನ್ನು ನಿಷೇಧಿಸುತ್ತೇವೆ ಎಂಬುದು ಅಪಘಾತವಾಗಲಿದೆ ಎಂಬ ಕಾರಣಕ್ಕೆ ವಾಹನ ಸಂಚಾರ ನಿಷೇಧಿಸುವ ಕ್ರಮದಂತಾಗಿದೆ ಎಂದು ರಾಮ್ ಗೋಪಾಲ್ ವರ್ಮ ವ್ಯಂಗ್ಯವಾಡಿದ್ದಾರೆ. ಆ.2 ರಂದು ಟ್ವಿಟರ್ ನಲ್ಲಿ ಪೋರ್ನ್ ಬ್ಯಾನ್ ಎಂಬ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿತ್ತು.

SCROLL FOR NEXT