ದೇಶ

ಗಂಗೆ ಕಲುಷಿತ: ಕೈಗಾರಿಕಾ ಘಟಕಗಳ ಮೇಲೆ ಶೀಘ್ರದಲ್ಲೇ ಕಠಿಣ ಕ್ರಮ; ಉಮಾ ಭಾರತಿ

ನವದೆಹಲಿ: ಪವಿತ್ರ ಗಂಗಾ ನದಿಯನ್ನು ಕಲುಷಿತ ಮಾಡುತ್ತಿರುವ ಕೈಗಾರಿಕಾ ಘಟನಗಳ ಮೇಲೆ ಶೀಘ್ರದಲ್ಲಿಯೇ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವೆ ಉಮಾ ಭಾರತಿ ಗುರುವಾರ ಹೇಳಿದ್ದಾರೆ.

ಈ ಕುರಿತಂತೆ ಲೋಕಸಭೆಯ ಪ್ರಶ್ನಾವಳಿ ವಿಭಾಗದಲ್ಲಿ ಮಾತನಾಡಿರುವ ಅವರು, ಗಂಗಾನದಿ ಸ್ವಚ್ಛತಾ ಕಾರ್ಯ ಯೋಜನೆ ಅನುಷ್ಟಾನಕ್ಕೆ ಬರಲು ಕ್ಯಾಬಿನೆಟ್ ಅಂತಿಮ ಒಪ್ಪಿಗೆಗೆ ಕಳುಹಿಸಲಾಗಿದೆ. ಗಂಗಾನದಿ ಸ್ವಚ್ಛತಾ ಕಾರ್ಯಕ್ಕೆ ಸಾರ್ವಜನಿಕರೂ ಸಹ ಸರ್ಕಾರದ ಜೊತೆ ಕೈ ಜೋಡಿಸುವಂತೆ ಮನವಿಮಾಡಲಾಗಿದ್ದು, ಗಂಗಾ ನದಿಯನ್ನು ಕಲುಷಿತ ಮಾಡುತ್ತಿರುವ ಕೈಗಾರಿಕಾ ಘಟಕಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಈಗಾಗಲೇ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಗಂಗಾ ನದಿ ಸ್ವಚ್ಛತಾ ಕಾರ್ಯಕ್ಕೆ ಸಾರ್ವಜನಿಕರ ಭಾಗವಹಿಸುವಿಕೆಗೆ ಈಗಾಗರೇ 528 ಕೋಟಿ ಹಣವನ್ನು ಮೀಸಲಿಡಲಾಗಿದ್ದು, ಜೂನ್ ಅಂತಿಮದವರೆಗೆ 91.75 ಲಕ್ಷ ಹಣವನ್ನು ಖರ್ಟು ಮಾಡಲಾಗಿದೆ. ಗಂಗಾ ನದಿಯಲ್ಲದೆಯೇ ಮತ್ತಿತ್ತರ ನದಿಗಳಾದ ಯಮುನಾ, ಗೋಮ್ಟಿ, ದಾಮೋದರ್ ನದಿಗಳ ಸ್ವಚ್ಛತಾ ಕಾರ್ಯಕ್ಕೂ ಸರ್ಕಾರ ಮುಂದಾಗಿದ್ದು, ಈಗಾಗಲೇ ಸ್ಚಚ್ಛಾ ಕಾರ್ಯಾಚರಣೆ ಆರಂಭವಾಗಿದೆ ಎಂದು ಹೇಳಿದ್ದಾರೆ.

SCROLL FOR NEXT