ಚರ್ಚಿಲ್ ಅಲೆಮಾವೋ 
ದೇಶ

ಬರ್ಗರ್ ಭ್ರಷ್ಟಾಚಾರ ಪ್ರಕರಣ: ಗೋವಾ ಮಾಜಿ ಸಚಿವ ಚರ್ಚಿಲ್ ಬಂಧನ

ಲೂಯಿಸ್ ಬರ್ಗರ್ ಭ್ರಷ್ಟಾಚಾರ ಪ್ರಕರಣ ಸಂಬಂಧ ಗೋವಾ ಮಾಜಿ ಲೋಕತೋಪಯೋಗಿ ಸಚಿವ ಅಲೆಮಾವೋ ಚರ್ಚಿಲ್ ಅವರನ್ನು ಗೋವಾ ಪೊಲೀಸರು...

ಪಣಜಿ: ಲೂಯಿಸ್ ಬರ್ಗರ್ ಭ್ರಷ್ಟಾಚಾರ ಪ್ರಕರಣ ಸಂಬಂಧ ಗೋವಾ ಮಾಜಿ ಲೋಕತೋಪಯೋಗಿ ಸಚಿವ ಚರ್ಚಿಲ್ ಅಲೆಮಾವೋ ಅವರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.

ಚರ್ಚಿಲ್ ಅವರನ್ನು ಅವರ ವರ್ಕಾ ಗ್ರಾಮದ ನಿವಾಸದಲ್ಲಿ ನಿನ್ನೆ ತಡರಾತ್ರಿ ಗೋವಾ ಪೊಲೀಸರು ಬಂಧಿಸಿದ್ದಾರೆ. ಮಾಜಿ ಸಚಿವರ ಬಂಧನವನ್ನು ಅಪರಾಧ ವಿಭಾಗದ ಎಸ್‌ಪಿ ಕಾರ್ತಿಕ್ ಕಶ್ಯಪ್ ಅವರು ಖಚಿತಪಡಿಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.

ಅಮೆರಿಕದ ನ್ಯೂಜರ್ಸಿಯ ಲೂಯಿಸ್ ಕಂಪನಿ, ಬಹುಕೋಟಿ ಜಲಾಭಿವೃದ್ಧಿ ಯೋಜನೆಯ ಗುತ್ತಿಗೆ ಪಡೆಯಲು ಗೋವಾ ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಹಾಗೂ ಮಾಜಿ ಸಚಿವ ಚರ್ಚಿಲ್ ಅಲೆಮಾವೋ ಅವರಿಗೆ 6 ಕೋಟಿ ರುಪಾಯಿ ಲಂಚ ನೀಡಲಾಗಿದೆ. ಈ ಸಂಬಂಧ ಇಬ್ಬರನ್ನೂ ಗೋವಾ ಅಪರಾಧ ವಿಭಾಗದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.

ಗೋವಾದಲ್ಲಿ ಕೇಂದ್ರ ಸರ್ಕಾರ ಜಪಾನ್ ಸರ್ಕಾರದೊಂದಿಗೆ ಜಂಟಿ ಯಾಗಿ ಆರಂಭಿಸಲು ಯೋಜಿಸಿದ್ದ ನೀರು ಸರಬರಾಜು ಮತ್ತು ಒಳಚರಂಡಿ ಅಭಿವೃದ್ಧಿ ಪಂಚವಾರ್ಷಿಕ ಯೋಜನೆಗಾ ಗಿ  ಟೆಂಡರ್ ಕರೆಯಲಾಗಿತ್ತು. ಅಮೆರಿಕದ ಕಂಪನಿ ಇದನ್ನು ಪಡೆದ ನಂತರ, ಲಂಚ ನೀಡುವ ಮೂಲಕ ಗುತ್ತಿಗೆ ಪಡೆದಿದ್ದಾರೆಂಬ ಆರೋಪವನ್ನು ಕಂಪನಿ ಅಧಿಕಾರಿಗಳು ಈಗಾಗಲೇ ಒಪ್ಪಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT