ಸಾಂದರ್ಭಿಕ ಚಿತ್ರ 
ದೇಶ

ಬಿಜೆಪಿ ರೈತ ಚೈತನ್ಯಯಾತ್ರೆ

ಆತ್ಮಹತ್ಯೆ ಹಾದಿ ಹಿಡಿದಿರುವ ರೈತರಲ್ಲಿ ಆತ್ಮಸ್ಥೈರ್ಯ ತುಂಬಲು, ಕರ್ನಾಟಕ ಸರ್ಕಾರವನ್ನು ಎಚ್ಚರಿಸಲು ಬಿಜೆಪಿ ರಾಜ್ಯ ಘಟಕ `ರೈತ ಚೈತನ್ಯ ಯಾತ್ರೆ' ...

ನವದೆಹಲಿ: ಆತ್ಮಹತ್ಯೆ ಹಾದಿ ಹಿಡಿದಿರುವ ರೈತರಲ್ಲಿ ಆತ್ಮಸ್ಥೈರ್ಯ ತುಂಬಲು, ಕರ್ನಾಟಕ ಸರ್ಕಾರವನ್ನು ಎಚ್ಚರಿಸಲು ಬಿಜೆಪಿ ರಾಜ್ಯ ಘಟಕ `ರೈತ ಚೈತನ್ಯ ಯಾತ್ರೆ' ಹಮ್ಮಿಕೊಂಡಿದೆ.  ಆ. 31 ರಿಂದ ಸೆ.14ರ ವರೆಗೆ  ವರೆಗೆ ಹಾವೇರಿಯಿಂದ ಮೈಸೂರುವರೆಗೆ ಎರಡು ತಂಡಗಳಲ್ಲಿ ಯಾತ್ರೆ ನಡೆಸಲಾಗುತ್ತದೆ. ಯಾತ್ರೆ ವೇಳೆ 75 ಸ್ಥಳಗಳಲ್ಲಿ ಸಾರ್ವಜನಿಕ ಸಭೆ ನಡೆಸಲು ನಿರ್ಧರಿಸಲಾಗಿದೆ.
ದೆಹಲಿಯಲ್ಲಿ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ರಾಜ್ಯದ ಬಿಜೆಪಿ ಸಂಸ ದರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಅಧ್ಯಕ್ಷ  ಪ್ರಹ್ಲಾದ ಜೋಷಿ ತಿಳಿಸಿದರು. ಈ ಹಿಂದೆ ಯಡಿಯೂರಪ್ಪ ಸರ್ಕಾರ ಇದ್ದಾಗ ಬರ ಬಂದು ರೈತರು ಸಂಕಷ್ಟಕ್ಕೆ ಸಿಲುಕಿದಾಗ ರೈತರ ಬೆಳೆ ಸಾಲ ಮನ್ನಾ ಮಾಡಿತ್ತು.
ಸಿದ್ಧರಾಮಯ್ಯ ಸರ್ಕಾರವೂ ಬೆಳೆ  ಸಾಲ ಮನ್ನಾ ಮಾಡಿ ರೈತರಿಗೆ   ರೈತರಿಗೆ ನೆರವಾಗಬೇಕು ಎಂದರು. 14ನೇ ಹಣಕಾಸು ಆಯೋಗದಡಿ ಇದುವರೆಗೆ ರು. 8,550 ಕೋಟಿಯನ್ನು ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಬಿಡುಗಡೆ ಮಾಡಿದೆ. ಅದನ್ನು ರೈತರ ಸಂಕಷ್ಟ ನಿವಾರಿಸಲು  ಬಳಸಿಕೊಳ್ಳಬೇಕು. ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯಿಂದ ಪರಿಹಾರ ಪಡೆಯಲು ರಾಜ್ಯ ಸರ್ಕಾರ ಇದುವರೆಗೆ ಪ್ರಸ್ತಾಪ ಸಲ್ಲಿಸಿಲ್ಲ. ಸಲ್ಲಿಸಿದರೆ ಕೇಂದ್ರ ನೆರವು ಒದಗಿಸುತ್ತದೆ ಎಂದರು.
ಸ್ಥಳಾಂತರ ಇಲ್ಲ: ತುಮಕೂರಿನ ಗುಬ್ಬಿಯಲ್ಲಿ ಎಚ್‍ಎಎಲ್ ಸ್ಥಾಪಿಸಲುದ್ದೇಶಿಸಿರುವ ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಸ್ಥಳಾಂತರಿಸುವ ಪ್ರಸ್ತಾಪ ಇಲ್ಲ  ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಸ್ಪಷ್ಟಪಡಿಸಿದ್ದಾರೆಂದು ಜೋಷಿ ತಿಳಿಸಿದ ರು. ಭೂ ಸ್ವಾದೀನ ಪ್ರಕ್ರಿಯೆ ವಿಳಂಬವಾಗಿದೆ. ಜತೆಗೆ ಪ್ರಕರಣವೂ ಕೋರ್ಟಲ್ಲಿರುವುದರಿಂದ ರಾಜ್ಯ ತನ್ನ ಅಧಿಕಾರ ಬಳಸಿ, ತ್ವರಿತವಾಗಿ ಇತ್ಯ ರ್ಥಪಡಿಸಿಕೊಳ್ಳಬೇಕು ಎಂದು ಪರ್ರಿಕರ್ ತಿಳಿಸಿ ದ್ದಾರೆಂದರು ಜೋಶಿ. ಬೆಂಗಳೂರಿನಲ್ಲಿ ನಡೆಯು ತ್ತಿರುವ ಏರೋ ಇಂಡಿಯಾ  ಪ್ರದರ್ಶನವನ್ನು ಗೋವಾಕ್ಕೆ ತಾಂತ್ರಿಕ ಕಾರಣಗಳಿಗಾಗಿ ಸ್ಥಳಾಂತರಿ ಸುವ ಪ್ರಸ್ತಾಪ ಇದೆ. ಒಂದು ವೇಳೆ ರಾಜ್ಯ ಸರ್ಕಾರ ಬೆಂಗಳೂರಲ್ಲೇ ಮುಂದುವರಿಸಲು ಬಯಸಿದರೆ ನಮ್ಮ ಬೆಂಬಲ ಇದೆ. ಸಂಚಾರ ದಟ್ಟಣೆ ಮತ್ತು ವಿಮಾನ ಸಂಚಾರಕ್ಕೆ ಅಡಚಣೆ ಕಾರಣಕ್ಕೆ ಸ್ಥಳಾಂತರಿಸುವ ಪ್ರಸ್ತಾಪ ಇದೆ. ರಕ್ಷಣಾ vಸಚಿವರು ಗೋವಾದವರು ಎಂಬ ಕಾರಣಕ್ಕಲ್ಲ ಎಂದೂ ಪ್ರಹ್ಲಾದ ಜೋಷಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!